
ಭುಜ್, 21 ನವೆಂಬರ್ (ಹಿ.ಸ.) :
ಆ್ಯಂಕರ್ : ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಲು ನುಸುಳುಕೋರರನ್ನು ತಡೆಯುವುದು ಅವಶ್ಯಕ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಗುಜರಾತ್‌ನ ಭುಜ್‌ನಲ್ಲಿ ನಡೆದ ಬಿಎಸ್ಎಫ್ ವಜ್ರ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ಜನರು ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ನುಸುಳುಕೋರರನ್ನು ಪ್ರತ್ಯೇಕಿಸಿ ದೇಶದಿಂದ ಹೊರಹಾಕಲಾಗುವುದು ಎಂದು ಹೇಳಿದ ಶಾ . ಎಸ್ಐಆರ್ ಪ್ರಕ್ರಿಯೆಯನ್ನು ವಿರೋಧಿಸುವ ಪಕ್ಷಗಳು ರಾಷ್ಟ್ರ ಹಿತಕ್ಕೆ ವಿರೋಧಿಯಾಗಿ ವರ್ತಿಸುತ್ತಿವೆ ಎಂದರು.
ಬಿಎಸ್ಎಫ್ ಕಳೆದ ಆರು ವರ್ಷಗಳಲ್ಲಿ ಗಡಿ ಭದ್ರತೆಯನ್ನು ಬಲಪಡಿಸಿರುವುದನ್ನು ಶಾ ಪ್ರಶಂಸಿ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಗಡಿಗಳಲ್ಲಿ ಬಿಎಸ್ಎಫ್ ಕಾರ್ಯಕ್ಷಮತೆ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಇತ್ತೀಚಿನ ಪಹಲ್ಗಾಂ ದಾಳಿಯ ನಂತರ ‘ಆಪರೇಷನ್ ಸಿಂದೂರ್’ ಮೂಲಕ ಜೈಶ್, ಹಿಜ್ಬುಲ್ ಮತ್ತು ಲಷ್ಕರ್ ಸಂಘಟನೆಗಳ ಒಂಬತ್ತು ಅಡಗುತಾಣಗಳನ್ನು ನಾಶಪಡಿಸಲಾಗಿದೆ ಎಂದು ಶಾ ತಿಳಿಸಿದರು. ನಕ್ಸಲಿಸಂ 2026ರ ಮಾರ್ಚ್‌ಗಲ್ಲಿ ಸಂಪೂರ್ಣ ನಿರ್ಮೂಲವಾಗುವ ವಿಶ್ವಾಸವಿದೆ ಎಂದರು.
ಗಡಿ ಭದ್ರತೆಯನ್ನು ತಂತ್ರಜ್ಞಾನ ಆಧಾರಿತವಾಗಿ ಬಲಪಡಿಸಲು ಇ-ಗಡಿ ಭದ್ರತೆ ಯೋಜನೆ ಜಾರಿಗೆ ಬರುತ್ತಿದೆ ಎಂದು ಶಾ ಹೇಳಿದರು.
ಸಮಾರಂಭದಲ್ಲಿ ಶೌರ್ಯಪದಕ ಸೇರಿದಂತೆ ಹಲವು ಗೌರವಗಳನ್ನು ಸಿಬ್ಬಂದಿಗೆ ಪ್ರದಾನಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa