ಕಾರ್ಮಿಕ ಸಂಹಿತೆಗಳ ಅನುಷ್ಠಾನ, ಕಾರ್ಮಿಕ ನೀತಿ ಸುಧಾರಣೆ ಪ್ರತೀಕ : ಪ್ರಧಾನಿ
ನವದೆಹಲಿ, 21 ನವೆಂಬರ್ (ಹಿ.ಸ.) : ಆ್ಯಂಕರ್ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಸ್ವಾತಂತ್ರ್ಯದ ನಂತರದ ಅತ್ಯಂತ ಸಮಗ್ರ ಮತ್ತು ಪ್ರಗತಿಪರ ಕಾರ್ಮಿಕ ಕೇಂದ್ರಿತ ಸುಧಾರಣೆಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಸಂಹಿತೆಗಳು ದೇಶದ ಕಾರ್ಮಿಕರನ್ನು ಸಬಲೀಕರ
Pm


ನವದೆಹಲಿ, 21 ನವೆಂಬರ್ (ಹಿ.ಸ.) :

ಆ್ಯಂಕರ್ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಸ್ವಾತಂತ್ರ್ಯದ ನಂತರದ ಅತ್ಯಂತ ಸಮಗ್ರ ಮತ್ತು ಪ್ರಗತಿಪರ ಕಾರ್ಮಿಕ ಕೇಂದ್ರಿತ ಸುಧಾರಣೆಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಸಂಹಿತೆಗಳು ದೇಶದ ಕಾರ್ಮಿಕರನ್ನು ಸಬಲೀಕರಣಗೊಳಿಸುವುದರ ಜೊತೆಗೆ ಅನುಸರಣೆಯನ್ನು ಸರಳಗೊಳಿಸಿ, ವ್ಯವಹಾರ ಮಾಡುವ ಸುಲಭತೆಯನ್ನು ಹೆಚ್ಚಿಸುತ್ತವೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಎಕ್ಸನಲ್ಲಿ ಪೋಸ್ಟ್ ಮಾಡಿ, ನಾಲ್ಕು ಕಾರ್ಮಿಕ ಸಂಹಿತೆಗಳು ಸಾರ್ವತ್ರಿಕ ಸಾಮಾಜಿಕ ಭದ್ರತೆ, ಕನಿಷ್ಠ ಹಾಗೂ ಸಕಾಲಿಕ ವೇತನ, ಸುರಕ್ಷಿತ ಕೆಲಸದ ಪರಿಸರ ಮತ್ತು ಮಹಿಳೆಯರು–ಯುವಕರಿಗೆ ಉತ್ತಮ ಅವಕಾಶಗಳ ಬಲವಾದ ಅಡಿಪಾಯವನ್ನು ಹಾಕುತ್ತವೆ ಎಂದು ಹೇಳಿದ್ದಾರೆ.

ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ ಭಾರತದ ಆರ್ಥಿಕ ಪ್ರಗತಿಗೆ ವೇಗ ನೀಡುವ, ಭವಿಷ್ಯಕ್ಕಾಗಿ ಸಿದ್ಧಗೊಂಡ ಪರಿಸರವನ್ನು ಈ ಸಂಹಿತೆಗಳು ನಿರ್ಮಿಸುತ್ತವೆ ಎಂದು ಅವರು ಹೇಳಿದ್ದಾರೆ. ಉದ್ಯೋಗ ಸೃಷ್ಟಿ, ಉತ್ಪಾದಕತೆ ಹೆಚ್ಚಳ ಮತ್ತು 'ವಿಕಸಿತ ಭಾರತ' ಗುರಿಯತ್ತ ಪ್ರಯಾಣವನ್ನು ವೇಗಗೊಳಿಸುವಲ್ಲಿ ಈ ಸುಧಾರಣೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದಿದ್ದಾರೆ.

ಕೇಂದ್ರ ಸರ್ಕಾರವು ಶುಕ್ರವಾರದಿಂದಲೇ ಜಾರಿಗೆ ಬರುವಂತೆ 29 ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳನ್ನು ಒಂದೇ ಜಾಲದಲ್ಲಿ ಸಂಗ್ರಹಿಸುವಂತೆ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಪ್ರಕಟಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande