ಚಿಲಿಯ ನಾಯಕಿಗೆ ಇಂದಿರಾ ಗಾಂಧಿ ಪ್ರಶಸ್ತಿ : ಬಿಜೆಪಿ ಆಕ್ಷೇಪ
ಅಂತಾರಾಷ್ಟ್ರೀಯ
Bhatiya


ನವದೆಹಲಿ, 21 ನವೆಂಬರ್ (ಹಿ.ಸ.) :

ಆ್ಯಂಕರ್ : ಚಿಲಿಯ ಮಾಜಿ ಅಧ್ಯಕ್ಷೆ ಮಿಚೆಲ್ ಬ್ಯಾಚೆಲೆಟ್ ಅವರಿಗೆ ನೀಡಲಾದ ‘ಶಾಂತಿ, ನಿಶಸ್ತ್ರೀಕರಣ ಮತ್ತು ಅಭಿವೃದ್ಧಿಗಾಗಿ 2024ರ ಇಂದಿರಾ ಗಾಂಧಿ ಪ್ರಶಸ್ತಿಯನ್ನು ಬಿಜೆಪಿ ತೀವ್ರವಾಗಿ ಪ್ರಶ್ನಿಸಿದೆ. ಪಕ್ಷದ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಕಾಂಗ್ರೆಸ್ ಪಕ್ಷದ ನೀತಿಯೇ “ರಾಷ್ಟ್ರವಿರೋಧಿ ಶಕ್ತಿಗಳ ಪರ” ಎಂದು ಆರೋಪಿಸಿದ್ದಾರೆ.

ಬ್ಯಾಚೆಲೆಟ್ ಅವರು ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ಭಾರತ ವಿರುದ್ಧ ಹಲವು ಬಾರಿ ಟೀಕೆ ನಡೆಸಿದ್ದರು. ವಿಶೇಷವಾಗಿ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸುವುದು, ಮಾನವ ಹಕ್ಕು ಉಲ್ಲಂಘನೆ ಆರೋಪಗಳು ಮತ್ತು ಸಿಎಎ ವಿರೋಧ ಎಲ್ಲವು ಕಾಂಗ್ರೆಸ್‌ ರೇಖೆಯಲ್ಲಿಯೇ ನಡೆದವು ಎಂದು ಹೇಳಿದರು.

“ಮಿಚೆಲ್ ಬ್ಯಾಚೆಲೆಟ್ ಭಾರತ ಪ್ರಜೆಯೂ ಅಲ್ಲ. ಆದರೂ ಅವರು ಸಿಎಎ ವಿರುದ್ಧ ಅರ್ಜಿ ಸಲ್ಲಿಸಿದರು. ಇದು ಸೋನಿಯಾ ಮತ್ತು ರಾಹುಲ್ ಗಾಂಧಿಯ ನಿರ್ದೇಶನದಲ್ಲೇ ನಡೆದಿತ್ತೆ?” ಎಂದು ಭಾಟಿಯಾ ಪ್ರಶ್ನಿಸಿದರು.

ಅವರು ಪ್ರಧಾನಿ ಮೋದಿ ಇತ್ತೀಚೆಗೆ ಮಾಡಿದ “ಮುಸ್ಲಿಂ-ಮಾವೋವಾದಿ ಕಾಂಗ್ರೆಸ್” ಎಂಬ ಹೇಳಿಕೆಯನ್ನು ಉಲ್ಲೇಖಿಸಿ, ಕಾಂಗ್ರೆಸ್ ಈಗ ಮಹಾತ್ಮ ಗಾಂಧಿಯ ಕಾಲದ ಪಕ್ಷವಲ್ಲ; ಬದಲಾಗಿ “ಮಾವೋವಾದಿ ಸಂಘಟನೆಗಳಂತೆ ನಡೆದುಕೊಳ್ಳುವ ಪಕ್ಷ” ಎಂದು ಆರೋಪಿಸಿದರು.

ಕಾಂಗ್ರೆಸ್‌ ನೇತೃತ್ವದಲ್ಲಿರುವ ಗಾಂಧಿ ಕುಟುಂಬದ ಮೇಲೆ ಭಾಟಿಯಾ ಗಂಭೀರ ಆರೋಪ ಮಾಡಿ, “ರಕ್ತನಾಳಗಳಲ್ಲಿ ಮೋಸದ ರಕ್ತ ಹರಿಯುತ್ತದೆ” ಎಂದು ಹೇಳಿದರು. ಕಾಂಗ್ರೆಸ್‌, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ವಿರೋಧಿ ಶಕ್ತಿಗಳೊಂದಿಗೆ ನಿಂತಿರುವುದು ಹೊಸದೇನಲ್ಲ ಎಂದು ಭಾಟಿಯಾ ಆರೋಪಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande