ಐದು ಪ್ರಮುಖ ಬೇಡಿಕೆಗಳ ಈಡೇರಿಸಲು ಪ್ರಧಾನಿಗೆ;ಸಿದ್ದರಾಮಯ್ಯ ಮನವಿ
ನವದೆಹಲಿ, 17 ನವೆಂಬರ್ (ಹಿ.ಸ.): ಆ್ಯಂಕರ್:ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸಂಜೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ, ರಾಜ್ಯದ ತುರ್ತು ಮತ್ತು ದೀರ್ಘಕಾಲಿಕ ಅಗತ್ಯಗಳಿಗೆ ಸಂಬಂಧಿಸಿದ ಐದು ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಜ್ಞಾಪಕ ಪತ್ರವನ್ನು ಸಲ್ಲ
Cm-pm meet


ನವದೆಹಲಿ, 17 ನವೆಂಬರ್ (ಹಿ.ಸ.):

ಆ್ಯಂಕರ್:ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸಂಜೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ, ರಾಜ್ಯದ ತುರ್ತು ಮತ್ತು ದೀರ್ಘಕಾಲಿಕ ಅಗತ್ಯಗಳಿಗೆ ಸಂಬಂಧಿಸಿದ ಐದು ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಜ್ಞಾಪಕ ಪತ್ರವನ್ನು ಸಲ್ಲಿಸಿದರು. ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಮಂತ್ರಿಗಳಿಗೆ ಸಲ್ಲಿಸಿದ ಪ್ರಮುಖ ಬೇಡಿಕೆಗಳ ಪಟ್ಟಿ ಇಂತಿದೆ..

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಒತ್ತಾಯ

ಕಲ್ಯಾಣ ಕರ್ನಾಟಕದ ಹಿಂದುಳಿದ ಜಿಲ್ಲೆಯಾದ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಅಗತ್ಯವಿದೆ ಎಂದು ಸಿದ್ದರಾಮಯ್ಯ ಹೇಳಿದರು. SC/ST ಮತ್ತು ಹಿಂದುಳಿದ ವರ್ಗಗಳ ಜನಸಂಖ್ಯೆ ಹೆಚ್ಚಿರುವ ಈ ಪ್ರದೇಶದಲ್ಲಿ “ಉನ್ನತ ಮಟ್ಟದ ರೆಫರಲ್ ಚಿಕಿತ್ಸಾ ಕೇಂದ್ರದ ಅಗತ್ಯವಿದೆ ಎಂದು ಅವರು ವಿವರಿಸಿದರು. ಸರ್ಕಾರ ಈಗಾಗಲೇ ಭೂಮಿಯನ್ನು ಗುರುತಿಸಿ, ವೈದ್ಯಕೀಯ ಕಾಲೇಜಿನ ಮೂಲಸೌಕರ್ಯ ರಚಿಸಿದೆ.

ಜಲ ಜೀವನ ಮಿಷನ್‌ಗೆ ₹13 ಸಾವಿರ ಕೋಟಿ ಬಾಕಿ

ರಾಜ್ಯವು ಈಗಾಗಲೇ 86% ಮನೆಗಳಿಗೆ ನೇರ ಟ್ಯಾಪ್ ನೀರು ಸಂಪರ್ಕ ನೀಡಿದ್ದರೂ, ಕೇಂದ್ರದಿಂದ ₹13,004 ಕೋಟಿ ರೂ. ಬಿಡುಗಡೆ ಆಗದೇ ಬಾಕಿಯಿದೆ ಎಂದು ಜ್ಞಾಪಕ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕೆಲಸ ಸ್ಥಗಿತಗೊಳ್ಳದಂತೆ ರಾಜ್ಯವು ₹1,500 ಕೋಟಿ ರೂ.ಗಳನ್ನು ಮುಂಗಡ ನೀಡಿದೆ. ಇನ್ನೂ ₹2,600 ಕೋಟಿ ರೂ. ಬಿಡುಗಡೆ ಆಗಬೇಕಿದೆ.

ಕಬ್ಬಿನ ಬೆಲೆ ಬಿಕ್ಕಟ್ಟು: ಶಾಶ್ವತ ಪರಿಹಾರಕ್ಕಾಗಿ ಒತ್ತಾಯ

ರಾಜ್ಯದಲ್ಲಿ ಇತ್ತೀಚಿನ ರೈತರ ಪ್ರತಿಭಟನೆಗಳ ನಂತರ ತಾತ್ಕಾಲಿಕ ಪರಿಹಾರವಾಗಿ ಪ್ರತಿ ಟನ್‌ಗೆ ₹100 ಹೆಚ್ಚುವರಿ ಪಾವತಿ ನಿಗದಿಯಾಗಿದ್ದು, ಅದರಲ್ಲೂ ₹50 ರಾಜ್ಯವೇ ಭರಿಸುತ್ತಿದೆ.

ಆದಾಗ್ಯೂ ಶಾಶ್ವತ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳು ಕೇಂದ್ರವನ್ನು ವಿನಂತಿಸಿದ್ದಾರೆ.

ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ (MSP) ಪರಿಷ್ಕರಣೆ

ಕರ್ನಾಟಕದಿಂದ ಎಥೆನಾಲ್ ಖರೀದಿಗೆ ಖಾತರಿ

ಕೊಯ್ಲು-ಸಾರಿಗೆ ವೆಚ್ಚ ನಿಗದಿಗೆ ರಾಜ್ಯಗಳಿಗೆ ಅಧಿಕಾರ ನೀಡಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.

ಪ್ರಮುಖ ನೀರಾವರಿ ಯೋಜನೆಗಳಿಗೆ ಅನುಮತಿ ಕೋರಿಕೆ

ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗದಿಂದ ತ್ವರಿತ ಅನುಮತಿ.

ಕೃಷ್ಣಾ ನ್ಯಾಯಮಂಡಳಿ ಪ್ರಶಸ್ತಿ – ದಶಕದಿಂದ ಬಾಕಿ ಇರುವ ಗೆಜೆಟ್ ಪ್ರಕಟಣೆ ಹೊರಡಿಸುವುದು.

ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಕೇಂದ್ರದ ಅನುದಾನ ಬಿಡುಗಡೆ

ಕಳಸಾ-ಬಂಡೂರಿ ಯೋಜನೆಗೆ ಅರಣ್ಯ, ವನ್ಯಜೀವಿ ಅನುಮತಿಗೆ ತಕ್ಷಣ ಕ್ರಮ ಕೈಗೊಳ್ಳುವುದು‌

ಪ್ರವಾಹ ಪರಿಹಾರಕ್ಕೆ ₹2,136 ಕೋಟಿ ಬೇಡಿಕೆ:

ಈ ವರ್ಷದ ವ್ಯಾಪಕ ಮಳೆ-ಪ್ರವಾಹದಿಂದ 14.5 ಲಕ್ಷ ಹೆಕ್ಟೇರ್ ಬೆಳೆ ಹಾನಿಗೊಳಗಾಗಿದ್ದು, 19 ಲಕ್ಷ ರೈತರಿಗೆ ನಷ್ಟವಾಗಿದೆ.

ರಾಜ್ಯವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ

ಬೆಳೆ ಹಾನಿಗೆ ₹614.9 ಕೋಟಿ ಬಿಡುಗಡೆ, ಮೂಲಸೌಕರ್ಯ ಪುನರ್ನಿರ್ಮಾಣಕ್ಕೆ ₹1,521.67 ಕೋಟಿ

ಬಿಡುಗಡೆ ಮಾಡಲು ಒತ್ತಾಯ.

ರಾಜ್ಯ ಹಿತಕ್ಕಾಗಿ ಮಂಡಿಸಿರುವ ಈ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಸಹಾನುಭೂತಿಪೂರ್ಣವಾಗಿ ಪರಿಗಣಿಸಲಿದೆ ಎಂಬ ಭರವಸೆಯನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande