
ಕೊಪ್ಪಳ, 15 ನವೆಂಬರ್ (ಹಿ.ಸ.) :
ಆ್ಯಂಕರ್ : ಬಲ್ದೋಟ ಸಮೂಹ ಸಂಸ್ಥೆ ಯು ಕೊಪ್ಪಳದಲ್ಲಿ ಇಂಟಿಗ್ರೇಟೆಡ್ ಉಕ್ಕಿನ ಕಾರ್ಖಾನೆಯನ್ನು ಸ್ಥಾಪನೆಗೆ ಮುಂದಾಗಿದ್ದು ಕೂಡಲೇ ಸ್ಥಾಪಿಸುವಂತೆ ಸರ್ಕಾರ ಮುಂಜಾಗ್ರತೆ ಕ್ರಮ ವಹಿಸಿ ಕಾರ್ಖಾನೆ ಅವರಿಗೆ ಸಹಕಾರ ನೀಡಬೇಕೆಂದು ಒತ್ತಾಯಿಸಿ ಕೊಪ್ಪಳದಲ್ಲಿ ಕಾರ್ಖಾನೆಗೆ ತಮ್ಮ ಹೂಲ ಜಮೀನು ಕಳೆದುಕೊಂಡಿರುವ ರೈತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಿ ಒತ್ತಾಯಿಸಿದರು.
ಉಕ್ಕಿನ ಕಾರ್ಖಾನೆ ಸ್ಥಾಪಿಸಿ ಇಲ್ಲವೇ ನಮಗೆಲ್ಲ ಸರ್ಕಾರಿ ನೌಕರಿ ಕೊಡಿ ಎಂದು ಪ್ರತಿಭಟನಾಕಾರರು ಬೃಹತ್ ಪ್ರತಿಭಟನೆ ನಡೆಸಿದರು. ನೇತೃತ್ವ ವಹಿಸಿದ ಹನುಮಂತಪ್ಪ ಕೌದಿ ಯವರು ಮಾತನಾಡಿ ಸರ್ಕಾರ ಮತ್ತು ಜಿಲ್ಲಾ ಆಡಳಿತ ಕೂಡಲೇ ಕೊಪ್ಪಳದಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಅವಕಾಶ ಕಲ್ಪಿಸಿ ಕೊಡಬೇಕು ಸಂಪೂರ್ಣ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಸದರಿ ಕಾರ್ಖಾನೆ, ಕೊಪ್ಪಳದಲ್ಲಿ ಕೂಡಲೇ ಸ್ಥಾಪನೆ ಆಗಬೇಕು ಆಡಳಿತ ಮಂಡಳಿ ಪರಿಸರ ಮಾಲಿನ್ಯದಿಂದ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಉತ್ತಮ ವ್ಯವಸ್ಥೆಯನ್ನು ಕೊಪ್ಪಳ ನಗರದ ಸಾರ್ವಜನಿಕರಿಗೆ ಕಲ್ಪಿಸಿ ಕೊಡಬೇಕು, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿ ಕೊಡಬೇಕು ಕಾರ್ಖಾನೆ ಸ್ಥಾಪಿಸಿ ಅಥವಾ ನಮಗೆಲ್ಲರಿಗೆ ಸರ್ಕಾರಿ ನೌಕರಿ ಒದಗಿಸಿಕೊಡಿ ಎಂದು ಒತ್ತಾಯಿಸಿ ಕೊಪ್ಪಳದಲ್ಲಿ ಕೂಡಲೇ ಉಕ್ಕಿನ ಕಾರ್ಖಾನೆ ಸ್ಥಾಪನೆ ಯಾಗಲು ಬಲದೋಟ ಕಂಪನಿಯ ಆಡಳಿತ ಮಂಡಳಿಗೆ ಸಹಕಾರ ನೀಡಬೇಕು ಎಂದು ಹಲವು ಸಂಘಟನೆಗಳು, ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯಪಡಿಸಿದ್ದಾರೆ.
ಮೆರವಣಿಗೆಯಲ್ಲಿ ಹನುಮಂತಪ್ಪ ಕೌದಿ ನಾಗರಾಜ್ ಗುರಿಕಾರ, ಕೆಮಪ್ಪ ಇಟಗಿ,, ಹನುಮಗೌಡ ಮಲಿಗೌಡ್ರ ಹನುಮನಗೌಡ ರೆಡ್ಡಿ, ಆನಂದ ಕಿನ್ನಾಳ ಭರಮಪ್ಪಗೊರವರ,ಪ್ರಾಣೇಶ್ ಹಾಲ್ವರ್ತಿ, ಬಸವರಾಜ್ ಬಡಿಗೇರ್, ಇರ್ಫಾನ್ ಸರ್ದಾರ್, ಮಹಿಬೂಬ್ ವಾಲಿಕಾರ್, ಭರಮಪ್ಪ ಗೊರವರ ಮರ್ದಾಾನ್ ಅಲಿ ದೇವಮ್ಮ ಹೊಸಮನಿ, ಪರದೇಘರ್, ಮಹಿಬೂಬ್ ಬಾಗಿಲಿ, ನಾಗರಾಜ್ ಚೀಲವಾಡಗಿ,ಆಸ್ಗರ್, ಉಸ್ಮಾನ್ ವಾಲಿಕಾರ್, ಅನ್ವರ್ ಪರದೆಗರ್, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್