
ಕೊಪ್ಪಳ, 15 ನವೆಂಬರ್ (ಹಿ.ಸ.) :
ಆ್ಯಂಕರ್ : ದೇಶದ ಭದ್ರತೆ ಹಾಗೂ ಅಭಿವೃದ್ಧಿಯ ಭಾಗವಾಗಿ ಬಿಹಾರಿಗರು ಎನ್ ಡಿಎ ಮೈತ್ರಿಕೂಟಕ್ಕೆ ಬಹುಮತ ನೀಡಿದ್ದಾರೆ. ಇದೊಂದು ಐತಿಹಾಸಿಕ ಕ್ಷಣವೆಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾವಟರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಹಿನ್ನಲೆ ಅವರು, ಮೂರನೇ ನಾಲ್ಕರಷ್ಟು ಬಹುಮತದೊಂದಿಗೆ ಬಿಹಾರದಲ್ಲಿ ಎನ್‌ಡಿಎ ಒಕ್ಕೂಟ ಮತ್ತೆ ಅಧಿಕಾರಕ್ಕೆರಿರುವುದು ದೇಶಕ್ಕೆ ಮೋದಿಯೇ ಇರಲಿ, ರಾಹುಲ್ ತೊಲಗಲಿ ಎಂಬುದು ಬಿಹಾರ ಮತದಾರನ ಸ್ಪಷ್ಟ ಸಂದೇಶವಾಗಿದೆ.
ವೋಟ್ ಚೋರಿ, ಇವಿಎಂ ದುರ್ಬಳಕೆ ಎಂದು ಸುಳ್ಳುಗಳ ಸರಮಾಲೆ ಎಣೆಯುತ್ತಿದ್ದ ರಾಹುಲ್ ಗಾಂಧಿಗೆ ಬಿಹಾರಿಗರು ತಕ್ಕ ಪಾಠ ಕಲಿಸಿದ್ದಾರೆ. ಕೇಂದ್ರ ಸರಕಾರ ತೆರಿಗೆ ಹಣ ನೀಡದೇ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದು ಕಾರಣ ನೀಡುತ್ತಿದ್ದ ಮುಖ್ಯಮಂತ್ರಿಸಿದ್ದರಾಮಯ್ಯನವರಿಗೆ ಬಿಹಾರದ ಫಲಿತಾಂಶದ ಮೂಲಕ ತಕ್ಕ ಉತ್ತರ ದೊರಕಿದೆ.
ನಮ್ಮ ಕೇಂದ್ರ ಸರಕಾರ, ಅಭಿವೃದ್ಧಿ ವಿಚಾರದಲ್ಲಿಯೂ ಎಂದಿಗೂ ರಾಜಕಾರಣ ಮಾಡುವುದಿಲ್ಲ. ದೇಶದ ಭದ್ರತೆ ವಿಚಾರದಲ್ಲಿಯೂ ಸದಾ ಬದ್ಧವಾಗಿದೆ. ಹೀಗಾಗಿ ಬಿಹಾರಿಗರು ಕಾಂಗ್ರೆಸ್ ಪಕ್ಷವನ್ನು ತಿರಸ್ಕೃತ ಮಾಡಿದ್ದಾರೆ. ಈ ಫಲಿತಾಂಶ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ನಡೆಯುವ ಚುನಾವಣೆಗೆ ದಿಕ್ಸೂಚಿಯಾಗಿದೆ. ಕರ್ನಾಟಕದ ಮತದಾರರು ಇಲ್ಲಿಯ ಕಾಂಗ್ರೆಸ್ ದುರಾಡಳಿತಕ್ಕೆ ಬೇಸತ್ತಿದ್ದಾರೆ. ಖಂಡಿತ ಮುಂದಿನ ದಿನಗಳಲ್ಲಿ ರಾಜ್ಯಕ್ಕೂ ಒಳ್ಳೆಯ ದಿನಗಳು ಬರಲಿವೆ ಎಂದು ವೈದ್ಯರಾದ ಕ್ಯಾವಟರ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್