


ಬಳ್ಳಾರಿ, 15 ನವೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‍ಮೆಂಟ್ (ಬಿಐಟಿಎಂ) ಮತ್ತು ಐಇಇಇ ಸ್ಟೂಡೆಂಟ್ಸ್‍ನ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ `ಪ್ರವರ್ತನ' ಔಟ್‍ರೀಚ್ -2025 ಅನ್ನು ಅಲ್ಲೀಪುರದ ಶ್ರೀ ಕಂಪಿಲರಾಯ ಗಿರಿಜನ ಪ್ರೌಢಶಾಲೆಯಲ್ಲಿ ಶನಿವಾರ ನಡೆಯಿತು.
ಶ್ರೀ ಕಂಪಿಲರಾಯ ಗಿರಿಜನ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಶಿವಕುಮಾರ್ ಅವರು, ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಜಾಗೃತಿ ಮತ್ತು ಭವಿಷ್ಯಕ್ಕೆ ತಯಾರಾಗುವ ಮನೋಭಾವ ಬೆಳೆಸುವುದಕ್ಕಾಗಿ ಪ್ರವರ್ತನವನ್ನು ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾಲೇಜಿನ ವಿದ್ಯಾರ್ಥಿಗಳು, ಆಧುನಿಕ ತಂತ್ರಜ್ಞಾನದ ಬೆಳವಣಿಗೆಯ ಹಾದಿ ಮತ್ತು ಡಿಜಿಟಲ್ ಯುಗದ ಅಗತ್ಯತೆ, ಇಂಟರ್ನೆಟ್ ಸುರಕ್ಷತೆ ಮತ್ತು ಡಿಜಿಟಲ್ ಹೊಣೆಗಾರಿಕೆ, ಹೊಸ ತಂತ್ರಜ್ಞಾನಗಳ ಪರಿಚಯ, ತಂತ್ರಜ್ಞಾನವನ್ನು ಉಪಯೋಗಿಸಿ ಕಲಿಕೆ, ಸಂಶೋಧನೆ ಹಾಗೂ ವೃತ್ತಿ ನಿರ್ಮಾಣ ಮಾಡುವ ಅವಕಾಶಗಳು, ಸ್ಮಾರ್ಟ್ ಫೋನ್ ಬಳಕೆ ಇ-ಲನಿರ್ಂಗ್, ಡಿಜಿಟಲ್ ಲೈಬ್ರರಿ ಬಳಕೆಯ ಮಹತ್ವ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಂತ್ರಜ್ಞಾನ ಸಹಾಯವು ಹೇಗೆ ಉಪಯುಕ್ತವೆಂಬುದರ ಅರಿವು, ಇತ್ಯಾದಿ ವಿಷಯಗಳನ್ನು ಸರಳವಾಗಿ ಹಾಗೂ ಉದಾಹರಣೆಗಳೊಂದಿಗೆ ವಿವರಿಸಿದರು.
ಶಿಕ್ಷಕರಾದ ನಾಗೇಶ್, ಬಿಐಟಿಎಂ ಪ್ರಾಧ್ಯಾಪಕರಾದ ಡಾ. ಅಬ್ದುಲ್ ಲತೀಫ್, ಡಾ. ನಾಸೀರ್, ಅಶ್ವಥನಾರಾಯಣ, ಉಲಗನಾಥನ್, ವಿಲಿಯಮ್ ಥಾಮಸ್, ಅಧೀಕ್ಷಕರಾದ ಬಸವರಾಜ್ ಬಿಸಲಹಳ್ಳಿ, ಆರೋಗ್ಯ ವಿಭಾಗದ ಡಾ. ತಾಕಿಫ್, ಅನ್ನಪೂರ್ಣ, ಮತ್ತು ವಿದ್ಯಾರ್ಥಿಗಳಾದ ಆನಂದ, ಸಂಚಿತ್, ಸಬರೀಶ್, ತಹೀಯ, ಗೌತಮಿ, ಜೀವನ್ ಮೊದಲಾದವರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್