
ವಿಜಯಪುರ, 10 ನವೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಶೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಕಾಲೇಜ್ ಆಫ್ ಫಾರ್ಮಸಿ ಆ್ಯಂಡ್ ರಿಸರ್ಚ್ ಸೆಂಟರ್ ನ 11 ಜನ ವಿದ್ಯಾರ್ಥಿಗಳು ನವೆಂಬರ್ 8 ಮತ್ತು 9 ರಂದು ಕಾಲೇಜಿನಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.
ಕಾಲೇಜಿನ ಪ್ಲೇಸ್ಮೆಂಟ್ ಸೆಲ್, ತುಮಕೂರಿನ ವೆಕ್ಸಪೋರ್ಡ್ ಲ್ಯಾಬೋರೇಟರೀಸ್ ಸಹಯೋಗದಲ್ಲಿ ಕ್ಯಾಂಪಸ್ ಡ್ರೈವ್ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬಿ. ಫಾರ್ಮಾ, ಎಂ. ಫಾರ್ಮಾ ಪದವೀಧರರು ಮತ್ತು ಸ್ಕೂಲ್ ಆಪ್ಲೈಡ್ ಸಾಯಿನ್ಸ್ ಆ್ಯಂಡ್ ಟೆಕ್ನಾಲಜಿ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಮೈಕ್ರೊಬಯಾಲಾಜಿ ಮತ್ತು ಜೈವಿಕ ತಂತ್ರಜ್ಞಾನ ವಿಭಾಗಗಳ ಒಟ್ಟು 56 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದರಲ್ಲಿ ಉದ್ಯೋಗಕ್ಕೆ ಆಯ್ಕೆಯಾದ 11 ವಿದ್ಯಾರ್ಥಿಗಳಲ್ಲಿ ಆರು ಜನರಿಗೆ ಸ್ಥಳದಲ್ಲಿಯೇ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಸಿ. ಮಲ್ಲಿಕಾರ್ಜುನ ಶೆಟ್ಟಿ, ನಿಯೋಜನೆ ಉಸ್ತುವಾರಿ ನಂಜಪ್ಪಯ್ಯ ಎಚ್. ಎಂ., ವೆಕ್ಸಪೋರ್ಡ್ ಲ್ಯಾಬೊರೆಟರಿ ವ್ಯವಸ್ಥಾಪಕ, ರಂಗನಾಥ ಬಿ. ಎಲ್. ಹಿರಿಯ ಜನರಲ್ ಮ್ಯಾನೇಜರ್ ಸಂಜಯ ಪಾಟೀಲ, ಕವಿತಾ ಆರ್. ಎನ್., ಕುಮಾರ ಜಿ., ಡಾ. ಡಿ. ಕೆ. ತೇಲಿ, ಕುಮಾರ ಜಿ., ಮುಂತಾದವರು ಉಪಸ್ಥಿತರಿದ್ದರು.
ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande