
ವಿಜಯಪುರ, 10 ನವೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಜೆ.ಎಂ.ರಸ್ತೆಯ ಜಂಡಾ ಕಟ್ಟಾ ನಿವಾಸಿಯಾದ 27 ವರ್ಷ ವಯಸ್ಸಿನ ಸಮ್ರೀನಾ ಗಂ.ಅಲ್ಲಾಭಕ್ಷ ಕೂಡಗಿ ಎಂಬ ಮಹಿಳೆ ನವೆಂಬರ್ 01 ರಿಂದ ಕಾಣೆಯಾಗಿರುವ ಕುರಿತು ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದ ಮಹಿಳೆಯ ಪತ್ತೆಗೆ ಠಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾಣೆಯಾದ ಮಹಿಳೆಯು ಸಾಧಾರಣ ಮೈಕಟ್ಟು, ದುಂಡುಮುಖ, ನೆಟ್ಟನೆಯ ಮೂಗು, ಸಾದಕಪ್ಪು ಮೈ ಬಣ್ಣ, 4.9 ಅಡಿ ಎತ್ತರವಿದ್ದು, ಹಿಂದಿ ಭಾಷೆ ಬಲ್ಲವಳಾಗಿದ್ದಾಳೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ನೈಟಿ ಧರಿಸಿದ್ದಳು. ಈ ಚಹರೆಪಟ್ಟಿಯುಳ್ಳ ಮಹಿಳೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ದೊರೆತಲ್ಲಿ ಗೋಲಗುಂಬಜ್ ಪೊಲೀಸ್ ಠಾಣೆ ದೂ: 08352-250214ಗೆ ಮಾಹಿತಿ ನೀಡುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande