ನನ್ನ ಮತ ನನ್ನ ಹಕ್ಕು ವಿಷಯ ಕುರಿತು ಛಾಯಾಗ್ರಹಣ ಸ್ಪರ್ಧೆ
ಗದಗ, 09 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗಿದ್ದು, ಅದರ ಅಂಗವಾಗಿ ನನ್ನ ಮತ ನನ್ನ ಹಕ್ಕು ಕುರಿತು ಎಲ್ಲ ಸರ್ಕಾರಿ/ ಖಾಸಗಿ ಅನುದಾನಿತ ಪಾಲಿಟೆಕ್ನಿಕ್ / ಇಂಜನೀಯರಿಂಗ್ ಕಾಲೇಜುಗಳಲ್ಲಿಯ ವಿದ್ಯಾರ್ಥಿಗಳಿಗೆ ಛಾಯಾಗ್ರಹಣ ( ಫೋಟೋಗ್ರಾಫಿ ಕಾಂಪಿಟೇಷನ್) ಸ್ಪರ್ಧೆಗ
ಪೋಟೋ


ಗದಗ, 09 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗಿದ್ದು, ಅದರ ಅಂಗವಾಗಿ ನನ್ನ ಮತ ನನ್ನ ಹಕ್ಕು ಕುರಿತು ಎಲ್ಲ ಸರ್ಕಾರಿ/ ಖಾಸಗಿ ಅನುದಾನಿತ ಪಾಲಿಟೆಕ್ನಿಕ್ / ಇಂಜನೀಯರಿಂಗ್ ಕಾಲೇಜುಗಳಲ್ಲಿಯ ವಿದ್ಯಾರ್ಥಿಗಳಿಗೆ ಛಾಯಾಗ್ರಹಣ ( ಫೋಟೋಗ್ರಾಫಿ ಕಾಂಪಿಟೇಷನ್) ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮತದಾನದ ಹಕ್ಕಿನ ಕುರಿತಾದ ಛಾಯಾಗ್ರಹಣದ (ಫೋಟೋಗ್ರಾಫಿ) ಚಿತ್ರಗಳನ್ನು ಅಕ್ಟೋಬರ್ 31 ರೊಳಗಾಗಿ ಇಲಾಖೆಯ ವೆಬ್ ಸೈಟ್ ನಲ್ಲಿ ಅಪಲೋಡ್ ಮಾಡಲು ಎಲ್ಲ ಸರ್ಕಾರಿ / ಖಾಸಗಿ ಅನುದಾನಿತ ಪಾಲಿಟೆಕ್ನಿಕ್ ಮತ್ತು ಇಂಜನೀಯರಿಂಗ್ ಕಾಲೇಜುಗಳಲ್ಲಿಯ ವಿದ್ಯಾರ್ಥಿಗಳಿಗೆ ಕೋರಿದೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ಮೂರು ಸ್ಪರ್ಧಾಳುಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande