ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಹೊಸದಾಗಿ ಮತದಾರ ಪಟ್ಟಿ ನೋಂದಣಿಗೆ ಅವಕಾಶ
ಗದಗ, 09 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಅರ್ಹತಾ ದಿನಾಂಕವಾಗಿ 1-11-2025 ನ್ನು ನಿಗದಿಪಡಸಿ ಮತದಾರರ ಪಟ್ಟಿಯ ಡಿ-ನೋವೋ ತಯಾರಿಕೆ ವೇಳಾಪಟ್ಟಿ ಹೊರಡಿಸಿ ಅದರಂತೆ ಕರ್ನಾಟಕ ಪಶ್ಚಿಮ ಪದವೀಧ
ಪೋಟೋ


ಗದಗ, 09 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಅರ್ಹತಾ ದಿನಾಂಕವಾಗಿ 1-11-2025 ನ್ನು ನಿಗದಿಪಡಸಿ ಮತದಾರರ ಪಟ್ಟಿಯ ಡಿ-ನೋವೋ ತಯಾರಿಕೆ ವೇಳಾಪಟ್ಟಿ ಹೊರಡಿಸಿ ಅದರಂತೆ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಇಆರ್‌ಓ, ಎಇಆರ್‌ಓ ಮತ್ತು ಡೆಸಿಗ್ನೇಟೆಡ್ ಆಫೀಸರ್ ವಿವರಗಳನ್ನು ಪ್ರಚುರಪಡಿಸಲಾಗಿದೆ.

ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಅರ್ಜಿದಾರರು ಭಾರತ ಪ್ರಜೆಯಾಗಿರುವ ಆಯಾ ಮತ ಕ್ಷೇತ್ರದೊಳಗಡೆ ಸಾಮಾನ್ಯವಾಗಿ ವಾಸಿಸುತ್ತಿರುವ ಹಾಗೂ 1 ನೇ ನವೆಂಬರ್ 2025 ಕ್ಕೆ ಮುಂಚೆ ಕನಿಷ್ಟ ಮೂರು ವರ್ಷಗಳಷ್ಟು ಮೊದಲು ಭಾರತದಲ್ಲಿರುವ ಯಾವುದಾದರೊಂದು ವಿಶ್ವ ವಿದ್ಯಾಲಯದ ಪದವೀಧರನಾಗಿರುವ ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅರ್ಹನಾಗಿರುತ್ತಾನೆ. ಅಗತ್ಯ ದಾಖಲಾತಿಯೊಂದಿಗೆ ನಮೂನೆ-18 ರಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಸಹಾಯಕ ಮತದಾರರ ನೊಂದಣಾಧಿಕಾರಿ ಹಾಗೂ ತಹಶೀಲ್ದಾರ ಗದಗ ಮತ್ತು ಸಹಾಯಕ ಮತದಾರರ ನೊಂದಣಾಧಿಕಾರಿ ಹಾಗೂ ಪೌರಾಯುಕ್ತರು, ಗದಗ ಬೆಟಗೇರಿ ನಗರಸಭೆ ಇವರ ಕಾರ್ಯಾಲಯದಲ್ಲಿ ನಮೂನೆ -18 ನ್ನು ಸಲ್ಲಿಸಬೇಕು.

ದಿನಾಂಕ: 30.09.2025 ರಿಂದ 06.11.2025 ರವರೆಗೆ ಸ್ವೀಕೃತ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಅರ್ಜಿಯನ್ನು ವಿಲೇಗೊಳಿಸಿ ದಿನಾಂಕ: 25.11.2025 ರಂದು ಕರಡು ಮತದಾರ ಪಟ್ಟಿಯನ್ನು ಹೊರಡಿಸಲಾಗುವುದು. ದಿನಾಂಕ: 25.11.2025 ರಿಂದ ದಿನಾಂಕ: 10.12.2025 ರವರೆಗೆ ಕರಡು ಮತದಾರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲವಕಾಶವನ್ನು ನೀಡಲಾಗುವುದು. ಸದರಿ ಅವಧಿಯಲ್ಲಿ ಸ್ವೀಕೃತ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಅರ್ಜಿಗಳನ್ನು ವಿಲೇಗೊಳಿಸಿ ದಿನಾಂಕ: 30.12.2025 ರಂದು ಅಂತಿಮ ಮತದಾರ ಪಟ್ಟಿಯನ್ನು ಪ್ರಕಟಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಸಹಾಯವಾಣಿ ಕೇಂದ್ರದ ಸಂಖ್ಯೆ 08372-238506 ನೇದ್ದಕ್ಕೆ ಕರೆ ಮಾಡಬಹುದಾಗಿದೆ ಎಂದು ಗದಗ ಉಪವಿಭಾಗಾದಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande