ಹೊಸಪೇಟೆ, 09 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : 2022-23ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ-4 ರಲ್ಲಿ ಮಂಜೂರಾದ ಕಮಲಾಪುರ ಪುರಸಭೆ ನೂತನ ಕಚೇರಿಯನ್ನು ಪೌರಾಡಳಿತ ಇಲಾಖೆ ಮತ್ತು ಪುರಸಭೆ ಕಾರ್ಯಾಲಯ ಸಹಯೋಗದಲ್ಲಿ ನಾಳೆ ಬೆಳಿಗ್ಗೆ.9.30 ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಕಮಲಾಪುರ ಪುರಸಭೆ ನೂತನ ಕಚೇರಿ ಕಟ್ಟಡವನ್ನು ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.
ರಾಜ್ಯದ ಪೌರಾಡಳಿತ ಸಚಿವರು ರಹೀಂಖಾನ್ ಘನ ಉಪಸ್ಥಿತಿ ವಹಿಸಿಲಿದ್ದಾರೆ. ಹೊಸಪೇಟೆ ಶಾಸಕ ಹೆಚ್.ಆರ್.ಗವಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಳ್ಳಾರಿ ಮತ್ತು ವಿಜಯನಗರ ಸಂಸದ ಈ.ತುಕಾರಾಮ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ.ಬಿ.ಪಾಟೀಲ್, ಶಶೀಲ್ ನಮೋಶಿ, ವೈ.ಎಂ.ಸತೀಶ್, ಕಮಲಾಪುರ ಪುರಸಭೆ ಅಧ್ಯಕ್ಷರು ಅಮೀನಾ. ವಿಶೇಷ ಆಹ್ವಾನಿತರು ಜಿಲ್ಲಾಧಿಕಾರಿ ಕವಿತಾ.ಎಸ್ ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ಜಿಲ್ಲಾ ಯೋಜನಾ ನಿರ್ದೇಶಕರು ಮನೋಹರ.ಕೆ.ಎಂ.ಎ.ಎಸ್, ಪುರಸಭೆ ಮುಖ್ಯಾಧಿಕಾರಿಗಳು ಡಿ.ಬಿ.ಈರಣ್ಣ. ಅತಿಥಿಗಳು ಪುರಸಭೆ ಉಪಾಧ್ಯಕ್ಷ ಹೆಚ್.ಗೋಪಾಲಕೃಷ್ಣ ಹಾಗೂ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ಅಜಯಕುಮಾರ್. ಕಮಲಾಪುರ ಪುರಸಭೆ ಸದಸ್ಯರು ರಾಜ, ಸೈಯ್ಯದ್ ಅಮಾನುಲ್ಲಾ, ಜಿ. ಅನ್ವರ್, ಕೆ.ವಿ.ಸರಿತಾ, ಮುಕ್ತಿಯಾರ್ ಪಾಷ, ಪಿ.ರವಿಕುಮಾರ್, ಪಾರ್ವತಿ, ಪಾಲಯ್ಯ, ಬಿ.ಕಿಶೋರ್‍ಕುಮಾರ, ಗೌಸಿಯಾ ಬೇಗಂ, ಮಮತಾ, ಈಶ್ವರಮ್ಮ, ಬೋರಮ್ಮ, ರಾಮಸ್ವಾಮಿ ಮಾಳಗಿ, ಎಂ.ಲಿಂಗಪ್ಪ, ಎನ್.ಗಂಗಮ್ಮ, ಜ್ಯೋತಿಬಾಯಿ. ನಾಮನಿರ್ದೇಶಿತ ಸದಸ್ಯರಾದ ಕನ್ನೇಶ್ವರ, ಟಿ.ಚಾಂದ್‍ಭಾಷ, ಜೆ.ಚೆನ್ನಪ್ಪ, ಎಂ.ಜಂಬಯ್ಯ, ಕೆ.ಸೋಮಶೇಖರ್, ಕಮಲಾಪುರ ಪುರಸಭೆ ಕಿರಿಯ ಅಭಿಯಂತರರು ಎಂ.ಮಲ್ಲಿಕಾರ್ಜುನ ಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರರು ಬಿ.ವೀರೇಶ್ ಮತ್ತು ಕಾರ್ಯಪಾಲಕ ಅಭಿಯಂತರರು ರುದ್ರೇಶ್ ನಾಯಕ್. ಗುತ್ತಿಗೆದಾರರು ಸಿಂಧನೂರು ಎಸ್.ಎಂ.ಅಹಮದ್ ಖಾದ್ರಿ ಆಗಮಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್