ರಾಯಚೂರು, 09 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ (ಕೆವಿಟಿಎಸ್ ಡಿಸಿ) ವತಿಯಿಂದ ಶುಶ್ರೂಷಕ ವೃತ್ತಿಪರರಿಗಾಗಿ ಪ್ರಾರಂಭಿಸಿರುವ ನೂತನ ಕಾರ್ಯಕ್ರಮ ಶುಶ್ರೂಷಕರ ವಿದೇಶೀ ಭಾಷೆ, ತರಬೇತಿಗೆ ಆಸಕ್ತ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ವಿದೇಶದಲ್ಲಿ ಉದ್ಯೋಗಾಸಕ್ತಿ ಹೊಂದಿರುವ ಎಲ್ಲಾ ಶುಶ್ರೂಷಕರು ಈ ಕಾರ್ಯಕ್ರಮದ ಮೂಲಕ ಜರ್ಮನ್, ಜಪಾನೀಸ್, ಇಂಗ್ಲೀμï ಮತ್ತು ಇತರ ವಿದೇಶೀ ಭಾμÉಗಳನ್ನು ಕಲಿತು ತಮ್ಮ ಸಾಗರೋತ್ತರ ಉದ್ಯೋಗಾಕಾಂಕ್ಷೆಗಳನ್ನು ಸಾಕಾರಗೊಳಿಸಿಕೊಳ್ಳಬಹುದಾಗಿದೆ.
ವಿದೇಶದಲ್ಲಿ ಉದ್ಯೋಗಾಸಕ್ತಿ ಹೊಂದಿರುವ ಎಲ್ಲಾ ಶುಶ್ರೂಷಕರಿಗೆ ವಿದೇಶಿ ಭಾಷೆ, ತರಬೇತಿಗಳು, ನಸಿರ್ಂಗ್ ಸಂಬಂಧಿತ ವಿಶೇಷ ಪರೀಕ್ಷೆ/ಕೋರ್ಸ್ ಗಳಿಗೆ ಮಾರ್ಗದರ್ಶನ, ವಿಷಯ ತಜ್ಞರಿಂದ ಮಾರ್ಗದರ್ಶನ, ವಿದೇಶದಲ್ಲಿ ವೃತ್ತಿ ಪರವಾನಗಿ ಮತ್ತು ಅರ್ಜಿ ಸಲ್ಲಿಕೆಗೆ ಬೆಂಬಲ, ವಿದೇಶಿ ಉದ್ಯೋಗದಾತರೊಂದಿಗೆ ಸಂದರ್ಶನ ಹಾಗೂ ಒಂದೇ ವೇದಿಕೆಯಲ್ಲಿ ಅನಂತ ಅವಕಾಶಗಳನ್ನು ಸಂಪೂರ್ಣ ಉಚಿತವಾಗಿ ಕಲ್ಪಿಸಿಲಾಗಿದೆ.
ಆಸಕ್ತಿಯುಳ್ಳ ಆಕಾಂಕ್ಷಿಗಳು ತರಬೇತಿಯಲ್ಲಿ ಭಾಗವಹಿಸುವ ಸಲುವಾಗಿ ವೆಬ್‍ಸೈಟ್: https://nursesflt.ksdckarnataka.come ಲಿಂಕ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ: 7338674796ಗೆ ಕಚೇರಿಯ ಸಮಯದಲ್ಲಿ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯ ಮಿಷನ್‍ನ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಜಿ.ಯು. ಹುಡೇದ್ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್