ಜಿಲ್ಲಾ ಮಟ್ಟದ ಯುವಜನೋತ್ಸವ : ಅಕ್ಟೋಬರ್ 17ರಂದು ಆಯ್ಕೆ ಪ್ರಕ್ರಿಯೆ
ರಾಯಚೂರು, 09 ಅಕ್ಟೋಬರ್(ಹಿ.ಸ.) : ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2025-26ನೇ ಸಾಲಿನ ರಾಯಚೂರು ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಪ್ರಕ್ರಿಯೆಯನ್ನು ಅಕ್ಟೋಬರ್ 17ರ ಬೆಳಿಗ್ಗೆ 10 ಗಂಟೆಗೆ ನಗರದ ಕೃಷಿ ವಿಶ್ವವಿದ್ಯಾಲಯದ ಆಡಿಟೋರಿಯಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಜಿ
ಜಿಲ್ಲಾ ಮಟ್ಟದ ಯುವಜನೋತ್ಸವ : ಅಕ್ಟೋಬರ್ 17ರಂದು ಆಯ್ಕೆ ಪ್ರಕ್ರಿಯೆ


ರಾಯಚೂರು, 09 ಅಕ್ಟೋಬರ್(ಹಿ.ಸ.) :

ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2025-26ನೇ ಸಾಲಿನ ರಾಯಚೂರು ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಪ್ರಕ್ರಿಯೆಯನ್ನು ಅಕ್ಟೋಬರ್ 17ರ ಬೆಳಿಗ್ಗೆ 10 ಗಂಟೆಗೆ ನಗರದ ಕೃಷಿ ವಿಶ್ವವಿದ್ಯಾಲಯದ ಆಡಿಟೋರಿಯಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಯುವಕ/ ಯುವತಿ ಮಂಡಳಿಗಳು ಸೇರಿದಂತೆ ಇನ್ನಿತರೆ ಸಂಸ್ಥೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿರೇಶ್ ನಾಯಕ ಅವರು ತಿಳಿಸಿದ್ದಾರೆ.

ನಿಗದಿಪಡಿಸಿದ ದಿನಾಂಕ ಹಾಗೂ ಸ್ಥಳದಲ್ಲಿ ಬೆಳಿಗ್ಗೆ 9 ಗಂಟೆಯ ಒಳಗಾಗಿ ಸ್ಪರ್ಧಾಳುಗಳು ತಮ್ಮ ಹೆಸರನ್ನು ನೋದಾಯಿಸಕೊಳ್ಳತಕ್ಕದ್ದು. ವಯಸ್ಸಿನ ದೃಢೀಕರಣಕ್ಕೆ ಆಧಾರ ಕಾರ್ಡ್ ಅಥವಾ ಜನ್ಮ ದಿನಾಂಕ ಇರುವ ಸರಕಾರಿ ಪ್ರಮಾಣ ಪತ್ರವನ್ನು ಹಾಗೂ ಸ್ವಯಂ ಬ್ಯಾಂಕ್ ಖಾತೆಯ ಝರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬಹುದಾಗಿದೆ.

ಸಾಂಸ್ಕøತಿಕ ವಿಭಾಗದಲ್ಲಿ ಜಾನಪದ ನೃತ್ಯ (ತಂಡ) 10 ಜನ ಭಾಗವಹಿಸಬಹುದಾಗಿದೆ. 15 ನಿಮಿಷಗಳನ್ನು ಸ್ಪರ್ಧಾ ಸಮಯವನ್ನು ನಿಗದಿಪಡಿಸಲಾಗಿದೆ. ಜನಪದ ಗೀತೆ (ತಂಡ) ಪ್ರಾದೇಶಿಕ ಭಾμÉಯಲ್ಲಿ 10 ಜನ ಭಾಗವಹಿಸಬಹುದಾಗಿದೆ. 07 ನಿಮಿಷಗಳನ್ನು ಸ್ಪರ್ಧಾ ಸಮಯವನ್ನು ನಿಗದಿಪಡಿಸಲಾಗಿದೆ. ಕಥೆ ಬರೆಯುವುದು (ವೈಯಕ್ತಿಕ) (1000 ಪದಗಳಿಗೆ ಮೀರದಂತೆ) ಹಿಂದಿ/ಆಂಗ್ಲ / ಪ್ರಾದೇಶಿಕ ಭಾಷೆಗೆ 60 ನಿಮಿಷಗಳನ್ನು ನಿಗದಿಪಡಿಸಲಾಗಿದೆ. ಚಿತ್ರಕಲೆ (ವೈಯಕ್ತಿಕ) 11.7”x16.5” 90 ನಿಮಿಷಗಳನ್ನು ನಿಗದಿಪಡಿಸಲಾಗಿದೆ. ಭಾಷಣಕ್ಕೆ (ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಇರಬೇಕು) 07 ನಿಮಿಷಗಳನ್ನು ನಿಗದಿಪಡಿಸಲಾಗಿದೆ. ಕವಿತೆ ಬರೆಯುವುದು (ವೈಯಕ್ತಿಕ) ಹಿಂದಿ /ಆಂಗ್ಲ / ಪ್ರಾದೇಶಿಕ ಭಾಷೆಯಲ್ಲಿ ಇರಬೇಕು. 90 ನಿಮಿಷಗಳನ್ನು ನಿಗದಿಪಡಿಸಲಾಗಿದ್ದು, ಸ್ಪರ್ಧಾಳುಗಳು ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಗಳು, ರಾಯಚೂರು ಇವರನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande