ಕೇಂದ್ರೀಕರಣ ವ್ಯವಸ್ಥೆಯಿಂದ ಸರ್ವಾಧಿಕಾರತ್ವ ಅಧಿಕ : ಬಿ ಆರ್ ಪಾಟೀಲ
ಗದಗ, 09 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಾಜ್ಯ ಸರ್ಕಾರದ ಮಹತ್ವದ ವಿಕೇಂದ್ರೀಕರಣ ಯೋಜನೆ ಅನುಷ್ಠಾನದ ಭಾಗವಾಗಿ ಕಿತ್ತೂರು ಕರ್ನಾಟಕದ ಎಲ್ಲ ಜಿಲ್ಲೆಗಳ 2026-27 ನೇ ಸಾಲಿನ ಅಭಿವೃದ್ಧಿ ಯೋಜನೆಗಳ ಕರಡು ಪ್ರತಿ ತಯಾರಿಕೆ ಪ್ರಗತಿ ಪರಿಶೀಲನೆ ಸಭೆ ಗದಗ ನಗರದ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು
ಪೋಟೋ


ಗದಗ, 09 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಜ್ಯ ಸರ್ಕಾರದ ಮಹತ್ವದ ವಿಕೇಂದ್ರೀಕರಣ ಯೋಜನೆ ಅನುಷ್ಠಾನದ ಭಾಗವಾಗಿ ಕಿತ್ತೂರು ಕರ್ನಾಟಕದ ಎಲ್ಲ ಜಿಲ್ಲೆಗಳ 2026-27 ನೇ ಸಾಲಿನ ಅಭಿವೃದ್ಧಿ ಯೋಜನೆಗಳ ಕರಡು ಪ್ರತಿ ತಯಾರಿಕೆ ಪ್ರಗತಿ ಪರಿಶೀಲನೆ ಸಭೆ ಗದಗ ನಗರದ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಮಚಾಯತ್ ರಾಜ್ ವಿವಿಯಲ್ಲಿ ಜರುಗಿತು.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮುಂಬರುವ ಸಾಲಿನ ಅಭಿವೃದ್ಧಿ ಯೋಜನೆಗಳನ್ನು ವಾರ್ಡ ವಾರು, ಗ್ರಾಮ ವಾರು, ಗ್ರಾಪಂ, ತಾಲ್ಲೂಕು, ಜಿಪಂ ಹಂತದಲ್ಕಿ ಸಭೆ ನಡೆಸಿ ಕರಡು ಪ್ರತಿಗಳನ್ನು ತಯಾರಿಸಿ ಜಿಲ್ಲಾಡಳಿತ ಪಡೆದಿದೆ. ಇದೇ ವರದಿಗಳ ಪ್ರಗತಿ ಪರಿಶೀಲನೆ ಸಭೆ ನಡೆದು ಸಾದಕ ಬಾಧಕ ಕುರಿತು ಚರ್ಚೆ ಜರುಗಿತು.

ರಾಜ್ಯ ನೀತಿ ಮತ್ತು ಯೋಜನೆ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾರ್ಚ ತಿಂಗಳಲ್ಲಿ ಬಜೆಟ್ ಮಂಡನೆ ಆಗುತ್ತದೆ. ಅದಕ್ಕೆ ಪೂರ್ವದಲ್ಲಿ ನವೆಂಬರ್ ಒಳಗಾಗಿ ಗ್ರಾಪಂ, ವಾರ್ಡ ಯೋಜನೆಗಳ ಕರಡು ಪ್ರತಿಗಳಿಗೆ ಅನುಮೋದನೆ ಪಡೆಯಬೇಕು ಎಂದು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದರು. ಆದರೆ, ಇನ್ನೂ ವರೆಗೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಇದಕ್ಕೆ ಸರ್ಕಾರಿ, ರಾಜಕಾರಣ, ಆಡಳಿತ ವ್ಯವಸ್ಥೆಯೇ ಕಾರಣವೆಂದರು.

ವಿಕೇಂದ್ರೀಕರಣ ವ್ಯವಸ್ಥೆಯೂ ಸಮರ್ಪಕವಾಗಿ ರಾಜ್ಯದಲ್ಲಿ ಅನುಷ್ಠಾನಗೊಂಡಿಲ್ಲ. ಕೇಂದ್ರೀಕರಣ ವ್ಯವಸ್ಥೆಯಿಂದ ಸರ್ವಾಧಿಕಾರತ್ವ ಅಧಿಕಗೊಳ್ಳುತ್ತದೆ. ಕೇಂದ್ರೀಕರಣ ವ್ಯವಸ್ಥೆಯಿಂದ ಗ್ರಾಮೀಣ ಮತ್ತು ನಗರದ ನಡುವೆ ಕಂದಕ ಸೃಷ್ಟಿ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಯೋಜನಾ ಸಮಿತಿಯು ಅ.10 ರ ಒಳಗಾಗಿ ವಾರ್ಡವಾರು, ತಾಪಂ, ಜಿಪಂನಲ್ಲಿ ಸಭೆ ನಡೆಸಿ ಯೋಜನೆಗಳ ಕುರುಡು ಪ್ರತಿಗಳನ್ನು ವಿಕೇಂದ್ರೀಕರಣ ಸಮಿತಿಗೆ ಸಲ್ಲಿಕೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದರು. ಕೇವಲ ಇನ್ನೂ ಎರಡು ದಿನ ಬಾಕಿ ಇರುವುದರಿಂದ ಚಮತ್ಕಾರ ಮಾಡಲು ಸಾಧ್ಯವಿಲ್ಲ. ಇನ್ನೂ 15 ದಿನಗಳ ಒಳಗಾಗಿ ವಾರ್ಡವಾರು, ತಾಪಂ, ಜಿಪಂಗಳಿಂದ ಅಭಿವೃದ್ಧಿ ಯೋಜನೆ ಗಳ ಕುರಿತು ಕರಡು ಪ್ರತಿ ಪಡೆದು ಸಭೆ ನಡೆಸಿ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಸಲ್ಲಿಡಬೇಕು. ಮುಂಬರುವ ಬಜೆಟ್ ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಮೀಸಲೀಡಲು ಸಾಧ್ಯವಾಗುತ್ತದೆ ಎಂದು ಉಪಾಧ್ಯಕ್ಷ ಬಿ.ಆರ್. ಪಾಟೀಲ ಹೇಳಿದರು.

ಪ್ರದೇಶವಾರು ಗ್ರಾಮೀಣ ಭಾಗದ ಸಮಸ್ಯೆಗಳು ಬೇರೆ ಬೇರೆ ಆಗಿರುತ್ತವೆ. ಜಿಪಂ ಸಿಇಓಗಳು ಗ್ರಾಮೀಣ ಭಾಗದ ಅಭಿವೃದ್ಧಿ, ನೀರು ಸಂರಕ್ಷಣೆ, ಸಮುದಾಯದ ಅಭಿವೃದ್ಧಿಗೆ ಕನ್ನಡಿ ಆಗಿರುತ್ತಾರೆ. ಹಾಗಾಗಿ ಮುಂಬರುವ 15 ದಿನಗಳ ಒಳಗಾಗಿ ತಮ್ಮ ವ್ಯಾಪ್ತಿಯ ಶಾಸಕರು, ಸಚಿವರನ್ನು ಸಂಪರ್ಕಿಸಿ ಯೋಜನೆ ಕರಡು ಪ್ರತಿಗಳನ್ನು ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಾಜ್ಯ ವಿಕೇಂದ್ರೀಕರಣ ಮತ್ತು ಯೋಜನೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಮೊದಲು ಮಂತ್ರಿಗಳು ಹೇಳಿದಂತೆ ಸರ್ಕಾರ ನಡೆಯುತ್ತಿತ್ತು. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಶಾಸಕರು ಹೇಳಿದಂತೆ ನಡೆಯುತ್ತಿತ್ತು. ಈಗ ಜನರಿಂದ ಸರ್ಕಾರ ನಡೆಯುವಂತೆ ಯೋಜನೆಗಳು ಸಿದ್ಧಗೊಳ್ಳಬೇಕು ಎಂದರು.

ಜಿಪಂ ಸಿಇಓ ಗಳು ಬ್ರೀಟೀಷ್ ಅಧಿಕಾರಿಗಳಲ್ಲ. ಐಎಎಸ್ ಅಧಿಕಾರಿಗಳು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕು. ಕೇವಲ ಮಾರ್ಗಸೂಚಿಗಳು ಹೇಳಿದಂತೆ ಕೆಲಸ ಮಾಡುವುದಲ್ಲ. ಇರುವ ಕಾನೂನುಗಳ ಪಾಲನೆಯೊಂದಿಗೆ ಕಾರ್ಯಗಳಾಗಬೇಕು ಎಂದು ಡಿ.ಆರ್. ಪಾಟೀಲ ಹೇಳಿದರು.

ಯುಪಿಎಸ್ಸಿ ಅಧಿಕಾರಿಗಳು ಭಾಗಶಃ ಗ್ರಾಮೀಣ ಭಾಗದಿಂದ ಬಂದವರಲ್ಲ. ಬೆರಳೆಣಿಕೆಯಷ್ಟು ಅಧಿಕಾರಿಗಳು ಗ್ರಾಮೀಣ ಭಾಗದಿಂದ ಬಂದವರು. ಆದರೆ ಗ್ರಾಮೀಣ ಭಾಗದ ಅಭಿವೃದ್ಧಿ ಯೋಜನೆ ರೂಪಿಸುವಲ್ಲಿ ಕಾರಣೀಕರ್ತರು ನೀವುಗಳೇ ಆಗಿರುತ್ತೀರಿ. ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಬುದ್ದಿವಂತಿಕೆ ಕೆಲಸ ಮಾಡಲಿ ಎಂದು ಡಿ.ಆರ್. ಪಾಟೀಲ ಹೇಳಿದರು.

ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣದೀಪ ಚೌದರಿ ಪ್ರಾಸ್ತಾವಿಕ ಮಾತನಾಡಿ, ಪಂಚಾಯತ್ ರಾಜ್ ಇಲಾಖೆ ಕಾನೂನಿನ ಪ್ರಕಾರ ವಿಕೇಂದ್ರೀಕರಣ ಅನುಷ್ಠಾನ ಪರಿಣಾಮಕಾರಿ ಆಗಬೇಕಿದೆ ಎಂದರು.

ಮೊದಲು ಮೇಲಿನ ಹಂತದಿಂದ (ಜಿಲ್ಲಾಡಳಿತ) ಕರಡು ಯೋಜನೆ ಸಿದ್ದಗೊಂಡು ಕೆಳಗಿನ ಹಂತದಲ್ಲಿ(ಗ್ರಾಪಂ, ವಾರ್ಡ) ಯೋಜನೆ ಜಾರಿ ಆಗುತ್ತಿತ್ತು. ಆದರೆ ಈಗ, ಕೆಳಗಿನ ಹಂತದಿಂದ ಕರಡು ಯೋಜನೆ ಸಿದ್ದಗೊಂಡು ಮೇಲಿನ ಹಂತಕ್ಕೆ ಅನುಮೋದನೆಗಾಗಿ ಕಳುಹಿಸಲಾಗಿತ್ತಿದೆ. ಮುಂದಿನ ಆರ್ಥಿಕ ವರ್ಷದ ಅಭಿವೃದ್ಧಿ ಯೋಜನೆಗಳಿಗಾಗಿ ನಿಗಧಿತ ಅವಧಿ ಒಳಗಾಗಿ ಯೋಜನೆಗಳಿಗೆ ಅನುಮೋದನೆ ಸಿಗಬೇಕಿದೆ.

ಇದರಂತೆ ಐದು ವರ್ಷದ ಯೋಜನೆಗಳು ತಯಾರಿ ಅನುಮೋದನೆ ಪಡೆಯಬೇಕು. ರಾಜ್ಯ ಮತ್ತು ಜಿಲ್ಲಾ ಹಣಕಾಸು ಖಾತೆಗಳಲ್ಲಿ ಇರುವ ಆರ್ಥಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಜತೆಗೆ ಕೋವಿಡ್ ನಂತರ ಸ್ಥಗಿತಗೊಂಡಿದ್ದ ಮಾನವ ಅಭಿವೃದ್ಧಿ ಸೂಚ್ಯಂಕ ಯೋಜನೆಯನ್ನು ಈಗ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಹಿರಿಯ‌ ನಿರ್ದೆಶಕ ಹಾಗೂ ಪದನಿಮಿತ್ಯ ಸರದಕಾರದ ಕಾರ್ಯದರ್ಶಿ ಬಸವರಾಜ ಎಸ್ ಅವರು ಯೋಜನೆ ರೂಪಿಸುವಲ್ಲಿ ವಹಿಸಬೇಕಾದ ಅಂಶಗಳ ಬಗ್ಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಗ್ರಾಪಂ, ತಾಪಂ, ವಾರ್ಡ ಕುರಿತು ಸಭೆ ನಡೆಸದ ಕುರಿತು ಚರ್ಚೆ ಜರುಗಿತು.

ಈ ವೇಳೆ ಜಿಪಂ ಬೆಳಗಾವಿ ಸಿಇಓ ರಾಹುಲ್ ಶಿಂದೆ, ವಿವಿ ಕುಲಪತಿ ಸುರೇಶ ನಾಡಗೌಡರ, ಬಾಗಲಕೋಟೆ ಸಿಇಓ ಶಶೀಧರ ಕುರೇರ, ಹಾವೇರಿ ಸಿಇಓ ರುಚಿ ಬಿಂದಾಲ, ಧಾರವಾಡ ಸಿಇಓ ಭುವನೇಶ ಪಾಟೀಲ, ವಿಜಯಪುರ ಸಿಇಓ ರಿಷಿ ಆನಂದ, ಉತ್ತರ ಕನ್ನಡ ಸಿಇಓ ದಿಲೀಪ್ ಶಶೀ, ಯೋಜನಾ ಇಲಾಖೆ ಜಂಟಿ ಕಾರ್ಯದರ್ಶಿ ಬಿ. ಜಾನಕಿರಾಂ, ಮಾಜಿ ಜಿಪಂ ಅಧ್ಯಕ್ಷ ವಾಸಣ್ಣ ಕುರಡಗಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande