ಹೊಸಪೇಟೆ, 09 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ತಾಲೂಕು ಕಾನೂನುಗಳ ಸೇವಾ ಸಮಿತಿ ಹೊಸಪೇಟೆ ಕಚೇರಿಯಲ್ಲಿ ಗುಮಾಸ್ತ, ಬೆರಳಚ್ಚುಗಾರ ತಾತ್ಕಾಲಿಕ ಹುದ್ದೆಯ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 27 ರ ಸಂಜೆ 5 ಗಂಟೆವರೆಗೆ ಕಾಲಾವಕಾಶ ನೀಡಲಾಗಿದೆ. ಕನಿಷ್ಟ ವಿದ್ಯಾರ್ಹತೆ ಯಾವುದೇ ಪದವಿ ಮತ್ತು ಕಂಪ್ಯೂಟರ್ ಮತ್ತು ಡೇಟಾವನ್ನು ಫೀಡ್ ಮಾಡುವ ಕೌಶಲ್ಯಗಳನ್ನು ಹೊಂದಿರಬೇಕು. ಅರ್ಜಿಯ ಸರಿಯಾದ ಸೆಟ್ಟಿಂಗ್ ನೊಂದಿಗೆ ಉತ್ತಮ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ವೇಗ ಹಾಗೂ ಡಿಕ್ಟೇಷನ್ ತೆಗೆದುಕೊಳ್ಳುವ ಮತ್ತು ನ್ಯಾಯಾಲಯಗಳಲ್ಲಿ ಪ್ರಸ್ತುತಿಗಾಗಿ ಕಡತ ನಿರ್ವಹಣೆ ಪ್ರಕ್ರಿಯೆ ಜ್ಞಾನ ಹೊಂದಿರಬೇಕು.
ಹುದ್ದೆಯ ನೇಮಕಾತಿಯು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, 6 ತಿಂಗಳ ಅವಧಿಗೆ ಗುತ್ತಿಗೆ ಅಧಾರದ ಮೇಲೆ ಮಾತ್ರ ಸೀಮಿತವಾಗಿರುತ್ತದೆ. ಅರ್ಜಿ ಸಲ್ಲಿಸುವ ವೇಳೆ ಶೈಕ್ಷಣಿಕ ಅರ್ಹತೆಯ ಕಂಪ್ಯೂಟರ್ ಜ್ಞಾನದ ದಾಖಲೆ ಪ್ರತಿಗಳು, ಅಧಾರ ಕಾರ್ಡ್ ನೇಮಕಾತಿ ಸಮಿತಿ ಕೋರಿದಾಗ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು.
ನಿಗಧಿತ ಅರ್ಜಿ ನಮೂನೆಯನ್ನು ತಾಲೂಕು ಕಾನೂನು ಸೇವಾ ಸಮಿತಿ ನ್ಯಾಯಾಲಯಗಳ ಆವರಣ ಹೊಸಪೇಟೆಯಲ್ಲಿ ಖುದ್ದಾಗಿ ಅಕ್ಟೋಬರ್ 8 ರಂದು ಬೆ.10:30 ರಿಂದ ಸಂಜೆ 5 ಗಂಟೆವರೆಗೆ ಪಡೆಯಬಹುದಾಗಿದೆ. ಅರ್ಜಿಗಳನ್ನು ಸಲ್ಲಿಸಬೇಕಾದ ವಿಳಾಸ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವಾ ಸಮಿತಿ ಹೊಸಪೇಟೆ. ವಿಜಯನಗರ ಜಿಲ್ಲೆ. ಹೆಚ್ಚಿನ ಮಾಹಿತಿಗಾಗಿ ಮೊ.9480662155 ಸಂಪರ್ಕಿಸಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಎನ್.ಸುಬ್ರಮಣ್ಯ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಪ್ರಶಾಂತ್ ನಾಗಲಾಪುರ್ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್