೫ಕೆಜಿ ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ವಿತರಣೆಗೆ ಸಚಿವ ಸಂಪುಟ ನಿರ್ಧಾರ
ಬೆಂಗಳೂರು, 09 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಾಜ್ಯ ಸರ್ಕಾರವು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಫಲಾನುಭವಿಗಳಿಗೆ ಅನ್ನಭಾಗ್ಯ ವಿತರಣೆ ವಿಧಾನವನ್ನು ಬದಲಾಯಿಸಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡಿದೆ. 10 ಕೆಜಿ ಅಕ್ಕಿಯ ಬದಲಾಗಿ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿಯ ಅಕ್ಕಿಯ ಮೌಲ್ಯದ ಆಹಾರ
೫ಕೆಜಿ ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ವಿತರಣೆಗೆ ಸಚಿವ ಸಂಪುಟ ನಿರ್ಧಾರ


ಬೆಂಗಳೂರು, 09 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಜ್ಯ ಸರ್ಕಾರವು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಫಲಾನುಭವಿಗಳಿಗೆ ಅನ್ನಭಾಗ್ಯ ವಿತರಣೆ ವಿಧಾನವನ್ನು ಬದಲಾಯಿಸಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡಿದೆ. 10 ಕೆಜಿ ಅಕ್ಕಿಯ ಬದಲಾಗಿ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿಯ ಅಕ್ಕಿಯ ಮೌಲ್ಯದ ಆಹಾರ ಪದಾರ್ಥಗಳನ್ನು “ಇಂದಿರಾ ಆಹಾರ ಕಿಟ್” ಮೂಲಕ ನೀಡಲು ನಿರ್ಧರಿಸಿದೆ ಎಂದು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಇಂದಿರಾ ಆಹಾರ ಕಿಟ್ ಅಡಿಯಲ್ಲಿ ಫಲಾನುಭವಿಗಳಿಗೆ ತೊಗರಿ ಬೇಳೆ, ಹೆಸರು ಕಾಳು, ಸಕ್ಕರೆ, ಉಪ್ಪು ತಲಾ 1 ಕೆಜಿ ಹಾಗೂ 1 ಲೀಟರ್ ಅಡುಗೆ ಎಣ್ಣೆ ನೀಡಲಾಗುತ್ತದೆ. ಅಕ್ಕಿಯ ದುರ್ಬಳಕೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ. ಯೋಜನೆಗೆ 6,119.52 ಕೋಟಿ ವೆಚ್ಚವಾಗಲಿದ್ದು

ಬಜೆಟ್ ಮರುಹಂಚಿಕೆಯ ಮೂಲಕ ವೆಚ್ಚ ಸರಿದೂಗಿಸಲಾಗುವುದು ಎಂದು ತಿಳಿಸಿದರು.

ಸಚಿವ ಸಂಪುಟದ ಇತರೆ ಪ್ರಮುಖ ನಿರ್ಧಾರಗಳು:

ಹೆಣ್ಣುಮಕ್ಕಳಿಗೆ ವೇತನ ಸಹಿತ ಒಂದು ದಿನ ಋತುಚಕ್ರ ರಜೆ ನೀಡುವುದು.

ರಸಗೊಬ್ಬರ ಯೋಜನೆ: 2025-26ನೇ ಸಾಲಿನಲ್ಲಿ ರಸಗೊಬ್ಬರ ದಾಸ್ತಾನಿಗಾಗಿ ₹200 ಕೋಟಿ ಅನುದಾನ. ಸಾಲಕ್ಕೆ ಬಂಡವಾಳ ಖಾತ್ರಿ ಒಪ್ಪಿಗೆ.

ಜಲಾನಯನ ಅಭಿವೃದ್ಧಿ ಘಟಕ: ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ ಅಡಿಯಲ್ಲಿ 15 ಯೋಜನೆಗಳನ್ನು 15 ತಾಲೂಕುಗಳಲ್ಲಿ ₹90 ಕೋಟಿ ವೆಚ್ಚದಲ್ಲಿ ಅನುಷ್ಠಾನ.

ರಾಜ್ಯ ಸಿವಿಲ್ ಸೇವೆ ನೇಮಕಾತಿ: ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ, 29.09.2025 ರ ಆದೇಶಕ್ಕೆ ಘಟನೋತ್ತರ ಅನುಮೋದನೆ.

ಅರಣ್ಯ ಭೂಮಿಗಳು: ಬೆಂಗಳೂರು ಉತ್ತರ ತಾಲ್ಲೂಕಿನ ಮಾಚೋಹಳ್ಳಿ ಗ್ರಾಮ, ಸರ್ವೆ ನಂ. 81 ರಲ್ಲಿ 78 ಎಕರೆ ಅರಣ್ಯ ಪ್ರದೇಶ ಕಂದಾಯ ಇಲಾಖೆಗೆ ಬಿಡುಗಡೆ; ಜಮೀನಿನ ವಿತರಣೆಯ ಹಿನ್ನಲೆಯಲ್ಲಿ ಹಿಂಪಡೆಯುವ ಕುರಿತ ಚರ್ಚೆ.

5ನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು ನವೆಂಬರ್ ತನಕ ವಿಸ್ತರಣೆ.

ICJS-2.0 ಯೋಜನೆ: ಕೇಂದ್ರ ಮಂತ್ರಾಲಯದ ಅನುಮೋದನೆದಲ್ಲಿ ₹89.22 ಕೋಟಿ ವೆಚ್ಚದಲ್ಲಿ ಪೊಲೀಸ್ ಉಪಕರಣ ಖರೀದಿ ಮತ್ತು ತರಬೇತಿ ಕಾರ್ಯಗಳು.

ಶ್ರಮಿಕ ವಸತಿ ಶಾಲೆಗಳು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು 11 ಶ್ರಮಿಕ ವಸತಿ ಶಾಲೆಗಳನ್ನು ₹405.55 ಕೋಟಿ ವೆಚ್ಚದಲ್ಲಿ ಸ್ಥಾಪನೆ.

ಕರ್ಮಿಕ ಕಲ್ಯಾಣ ನಿಧಿ: ತಿದ್ದುಪಡಿ ವಿಧೇಯಕ, 2025 ಅನುಮೋದನೆ.

ಸೇತುವೆ ಕಾಮಗಾರಿಗಳು: ಪುನರ್ ನಿರ್ಮಾಣ ಮತ್ತು ಪುನಶ್ವೇತನ ₹2,000 ಕೋಟಿ ವೆಚ್ಚದಲ್ಲಿ; ಮೊದಲ ಹಂತದಲ್ಲಿ PRAMC ಅಧ್ಯಯನದ 39 ಬೃಹತ್ ಸೇತುವೆಗಳ ಕಾಮಗಾರಿಗೆ ₹1,000 ಕೋಟಿ.

ಔರಾದ್ ಪುರಸಭೆ: ಬೀದರ್ ಜಿಲ್ಲೆ ಔರಾದ್ (ಬಿ) ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಕೆ.

ವೈದ್ಯಕೀಯ ಶಿಕ್ಷಣ: ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು; ಸ್ವಾಯತ್ತ ಸ್ಥಾನಮಾನ ಮತ್ತು 150 MBBS ಪ್ರವೇಶ ಮಿತಿಯೊಂದಿಗೆ ಪ್ರಾರಂಭ; 300 ಹಾಸಿಗೆಗಳ ಬೋಧನಾ ಆಸ್ಪತ್ರೆ, ವಸತಿ ನಿಲಯಗಳು ಸೇರಿದಂತೆ ಎಲ್ಲಾ ಅಗತ್ಯ ಕಾಮಗಾರಿಗೆ ₹550 ಕೋಟಿ ವೆಚ್ಚಕ್ಕೆ ಅನುಮೋದನೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande