ಗದಗ, 09 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : 2025-26 ನೇ ಸಾಲಿನಲ್ಲಿ ಹೊಯ್ಸಳ ಮತ್ತು ಕೆಳದಿ ಚನ್ನಮ್ಮ ಪ್ರಶಸ್ತಿ ಯೋಜನೆಯಡಿ ಜಿಲ್ಲಾ ಮಟ್ಟದ ಅಸಾಧರಣ ಪ್ರತಿಭಾ ಪುರಸ್ಕಾರಕ್ಕಾಗಿ ನಾವೀನ್ಯತೆ , ತಾರ್ಕಿಕ ಸಾಧನೆ, ಕ್ರೀಡೆ , ಕಲೆ, ಸಾಂಸ್ಕೃತಿಕ , ಸಮಾಜ ಸೇವೆ , ಸಂಗೀತ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಅಸಾಧಾರಣ ಪ್ರತಿಭಾ ಪುರಸ್ಕಾರ ಪ್ರಶಸ್ತಿಯನ್ನು ನೀಡಲು 5 ರಿಂದ 18 ವರ್ಷದ ಒಳಗಿನ ವಯೋಮಿತಿಯೊಳಗಿರುವ ಮಕ್ಕಳಿಗೆ ಪ್ರತಿ ಕ್ಷೇತ್ರದಲ್ಲಿ ಇಬ್ಬರು ಮಕ್ಕಳಂತೆ ಒಟ್ಟು 8 ಮಕ್ಕಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು.
ಆಯ್ಕೆಯಾದ ಪ್ರತಿ ಮಗುವಿಗೆ ತಲಾ 10,000/- ನಗದು ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ. ಅಸಾಧಾರಣ ಸಾಧನೆ ಮಾಡಿದ ಮಕ್ಕಳು ಅಸಾಧಾರಣ ಪ್ರತಿಭಾ ಪುರಸ್ಕಾರ ಪ್ರಶಸ್ತಿಗೆ ದಿ: 29-10-2025 ರ ಸಂಜೆ 5.30 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ
ಅರ್ಜಿದಾರರು ( ಜುಲೈ 31 ಕ್ಕೆ ) 5 ರಿಂದ 18 ವರ್ಷ ವಯೋಮಿತಿಯೊಳಗಿರಬೇಕು. ವಯಸ್ಸಿನ ಬಗ್ಗೆ ಜನನ ದಿನಾಂಕದ ಬಗ್ಗೆ ಜನನ ಪ್ರಮಾಣ ಪತ್ರ ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಣ ಮಾಡಿಸಿದ ಪ್ರತಿ ಲಗತ್ತಿಸಬೇಕು. ಅರ್ಜಿಯನ್ನು ದ್ವಿಪ್ರತಿಯಲ್ಲಿ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 006, ಜಿಲ್ಲಾ ಆಡಳಿತ ಭವನ, ಗದಗ- 582 101 , ದೂರವಾಣಿ ಸಂಖ್ಯೆ 08372-227011 ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP