ಮತಗಳ್ಳತನದಿಂದ ಬಿಜೆಪಿ ಅಧಿಕಾರಿಕ್ಕೆ : ಶಾಸಕ ನಾರಾ ಭರತರೆಡ್ಡಿ
ಬಳ್ಳಾರಿ, 07 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬಿಜೆಪಿ ಮತಗಳ್ಳತನದಿಂದಲೇ ಕೇಂದ್ರದಲ್ಲಿ ಸತತವಾಗಿ ಮೂರು ಅವಧಿಗೆ ಅಧಿಕಾರಕ್ಕೆ ಬಂದಿದೆ ಎಂದು ನಗರ ಶಾಸಕ ಭರತರೆಡ್ಡಿ ಅವರು ಆರೋಪಿಸಿದ್ದಾರೆ. ಗಡಿಗೆ ಚೆನ್ನಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿರುವ `ಬಿಜೆಪಿ ಮತಗಳ್ಳತನ
ಮತಗಳ್ಳತನದಿಂದ ಬಿಜೆಪಿ ಅಧಿಕಾರಿಕ್ಕೆ : ಶಾಸಕ ನಾರಾ ಭರತರೆಡ್ಡಿ


ಬಳ್ಳಾರಿ, 07 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬಿಜೆಪಿ ಮತಗಳ್ಳತನದಿಂದಲೇ ಕೇಂದ್ರದಲ್ಲಿ ಸತತವಾಗಿ ಮೂರು ಅವಧಿಗೆ ಅಧಿಕಾರಕ್ಕೆ ಬಂದಿದೆ ಎಂದು ನಗರ ಶಾಸಕ ಭರತರೆಡ್ಡಿ ಅವರು ಆರೋಪಿಸಿದ್ದಾರೆ.

ಗಡಿಗೆ ಚೆನ್ನಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿರುವ `ಬಿಜೆಪಿ ಮತಗಳ್ಳತನ ವಿರುದ್ಧ ಸಹಿ ಸಂಗ್ರಹ ಅಭಿಯಾನ'ಕ್ಕೆ ಮಂಗಳವಾರ ಚಾಲನೆ ನೀಡಿದ ಅವರು, ಭಾರತೀಯ ಜನತಾ ಪಕ್ಷ ಯಾವತ್ತೂ ಸಹ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ. ರಾಜ್ಯದಲ್ಲೂ ಅಥವಾ ಕೇಂದ್ರದಲ್ಲೂ ಮೋಸದಿಂದಲೇ ಮತಗಳ್ಳತನ, ಹಿಂಬಾಗಿಲ ಮೂಲಕ ಅಧಿಕಾರವನ್ನು ಪಡೆದಿದೆ ಎಂದು ಟೀಕಿಸಿದರು.

ಸಹಿ ಸಂಗ್ರಹ ಅಭಿಯಾನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್, ಮೇಯರ್ ಮುಲ್ಲಂಗಿ ನಂದೀಶ್, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್, ಬುಡಾ ಮಾಜಿ ಅಧ್ಯಕ್ಷ ಹುಮಾಯುನ್ ಖಾನ್, ಮಾಜಿ ಡೆಪ್ಯುಟಿ ಮೇಯರ್ ಬೆಣಕಲ್ಲು ಬಸವರಾಜ ಇನ್ನಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande