ಉತ್ತರ ಬಂಗಾಳದಲ್ಲಿ ಬಿಜೆಪಿ ಸಂಸದ, ಶಾಸಕರ ಮೇಲೆ ದಾಳಿ
ಸಿಲಿಗುರಿ, 06 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಉತ್ತರ ಬಂಗಾಳದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಬಿಜೆಪಿ ಸಂಸದ ಖಗೇನ್ ಮುರ್ಮು ಮತ್ತು ಶಾಸಕ ಶಂಕರ್ ಘೋಷ್ ಮೇಲೆ ಸೋಮವಾರ ದಾಳಿ ನಡೆದಿದೆ. ಈ ವೇಳೆ ಸಂಸದ ಖಗೇನ್ ಮುರ್ಮು ಗಾಯಗೊಂಡು ರಕ್ತಸಿಕ್ತರಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗ
Attack


ಸಿಲಿಗುರಿ, 06 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಉತ್ತರ ಬಂಗಾಳದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಬಿಜೆಪಿ ಸಂಸದ ಖಗೇನ್ ಮುರ್ಮು ಮತ್ತು ಶಾಸಕ ಶಂಕರ್ ಘೋಷ್ ಮೇಲೆ ಸೋಮವಾರ ದಾಳಿ ನಡೆದಿದೆ. ಈ ವೇಳೆ ಸಂಸದ ಖಗೇನ್ ಮುರ್ಮು ಗಾಯಗೊಂಡು ರಕ್ತಸಿಕ್ತರಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾಲ್ಡಾ ಉತ್ತರ ಸಂಸದ ಖಗೇನ್ ಮುರ್ಮು ಮತ್ತು ಸಿಲಿಗುರಿ ಶಾಸಕ ಶಂಕರ್ ಘೋಷ್ ಅವರು ಪರಿಹಾರ ಕಾರ್ಯಗಳನ್ನು ಪರಿಶೀಲಿಸಲು ತೆರಳುತ್ತಿದ್ದಾಗ ನಾಗರಕಟಾದ ಬಮಂಡಂಗಾ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಇಬ್ಬರು ನಾಯಕರು ಭದ್ರತಾ ಸಿಬ್ಬಂದಿಯೊಂದಿಗೆ ಪ್ರವಾಹ ಪೀಡಿತ ಪ್ರದೇಶದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಜನಸ್ತೋಮದಲ್ಲಿದ್ದ ಕೆಲವರು ಇದ್ದಕ್ಕಿದ್ದಂತೆ ಹಲ್ಲೆ ಮಾಡಿದ್ದಾರೆ.

ಘಟನೆಯಲ್ಲಿ ಸಂಸದ ಖಗೇನ್ ಮುರ್ಮು ಅವರ ಮುಖ ಹಾಗೂ ಮೂಗಿಗೆ ಗಾಯವಾಗಿ ರಕ್ತಸ್ರಾವವಾಯಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನಾಯಕರ ವಾಹನಗಳ ಮೇಲೂ ಕಲ್ಲು ಹಾಗೂ ಇಟ್ಟಿಗೆಗಳನ್ನು ಎಸೆದ ಪರಿಣಾಮ ಕಿಟಕಿಗಳು ಪುಡಿಪುಡಿಯಾಗಿವೆ.

ಘಟನೆಯ ನಂತರ ಬಿಜೆಪಿ, ತೃಣಮೂಲ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಶಮಿಕ್ ಭಟ್ಟಾಚಾರ್ಯ, ಎಕ್ಸನಲ್ಲಿ, ತೃಣಮೂಲ ಗೂಂಡಾಗಳು ಸಂಸದ ಖಗೇನ್ ಮುರ್ಮು ಮೇಲೆ ದಾಳಿ ಮಾಡಿದ್ದಾರೆ. ಈ ರಾಜ್ಯವನ್ನು ಕಾನೂನು ಅಲ್ಲ, ಅತ್ಯಾಚಾರಿಗಳು ಆಳುತ್ತಿದ್ದಾರೆ, ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಉತ್ತರ ಬಂಗಾಳ ಅಭಿವೃದ್ಧಿ ಸಚಿವ ಉದಯನ್ ಗುಹಾ, “ಘಟನೆಯ ವೇಳೆ ಪ್ರತಿಭಟನಾಕಾರರು ಯಾವುದೇ ಪಕ್ಷದ ಧ್ವಜಗಳನ್ನು ಹಿಡಿದಿರಲಿಲ್ಲ. ತೃಣಮೂಲ ಕಾಂಗ್ರೆಸ್ ಹೆಸರನ್ನು ಎಳೆದು ತರುವುದು ತಪ್ಪು,” ಎಂದು ಸ್ಪಷ್ಟನೆ ನೀಡಿದ್ದಾರೆ.

ಪೊಲೀಸರು ಸ್ಥಳದಲ್ಲಿ ಹೆಚ್ಚುವರಿ ಭದ್ರತೆ ಒದಗಿಸಿದ್ದು, ಘಟನೆ ಕುರಿತು ತನಿಖೆ ಪ್ರಾರಂಭಿಸಿದ್ದಾರೆ. ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande