ಟೋಲ್ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡನ ಪುತ್ರ, ಸಹಚರರಿಂದ ಹಲ್ಲೆ
ವಿಜಯಪುರ, 30 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕ್ಷುಲ್ಲಕ ಕಾರಣಕ್ಕಾಗಿ ಬಿಜೆಪಿ ಮುಖಂಡನ ಪುತ್ರ, ಟೋಲ್ ಸಿಬ್ಬಂದಿ ಮೇಲೆ ಹಲ್ಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಗ್ರಾಮದ ಬಳಿ ಇರುವ ಟೋಲ್ ನಲ್ಲಿ ನಡೆದಿದೆ. ವಿಜಯಪುರದಿಂದ ಥಾರ್‌‌ ಜೀಪಿ ನಲ್ಲಿ ಸಿಂದಗಿ ಕಡೆ ಹೊರಟಿ
ಹಲ್ಲೆ


ವಿಜಯಪುರ, 30 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕ್ಷುಲ್ಲಕ ಕಾರಣಕ್ಕಾಗಿ ಬಿಜೆಪಿ ಮುಖಂಡನ ಪುತ್ರ, ಟೋಲ್ ಸಿಬ್ಬಂದಿ ಮೇಲೆ ಹಲ್ಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಗ್ರಾಮದ ಬಳಿ ಇರುವ ಟೋಲ್ ನಲ್ಲಿ ನಡೆದಿದೆ.

ವಿಜಯಪುರದಿಂದ ಥಾರ್‌‌ ಜೀಪಿ ನಲ್ಲಿ ಸಿಂದಗಿ ಕಡೆ ಹೊರಟಿದ್ದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಪುತ್ರ ಸಮರ್ಥಗೌಡ ಪಾಟೀಲ್ ಹಾಗೂ ಸಹಚರಿಂದ ಟೋಲ್ ಸಿಬ್ಬಂದಿ ಸಂಗಪ್ಪನ ಮೇಲೆ ಮಾರಣಾಂತಿಕ ಹಲ್ಲೆಗೈದಿದ್ದಾರೆ.

ಟೋಲ್ ನಲ್ಲಿ ಹಣ ಕೇಳಿದ್ದಕ್ಕೆ ನಾನು ವಿಜುಗೌಡ ಮಗ ಎಂದು ಟೋಲ್ ಸಿಬ್ಬಂದಿಗೆ ಧಮ್ಕಿ ಹಾಕಿದ್ದಾನೆ. ಯಾವ ವಿಜುಗೌಡ ಅಂತಾ ಸಿಬ್ಬಂದಿ ಕೇಳಿದ್ದಕ್ಕೆ ಥಳಿಸಿದ್ದಾರೆ. ನಂತರ ಟೋಲ್ ಸಿಬ್ಬಂದಿ, ಹಲ್ಲೆಯನ್ನು ತಡೆದಿದ್ದಾರೆ. ಸದ್ಯ ಗಾಯಾಳು ಸಂಗಪ್ಪ ಸಿಂದಗಿ ತಾಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande