ರಾಯಚೂರು, 19 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸಂಚಾರಿ ಆರೋಗ್ಯ ಘಟಕಗಳಿಗೆ ವಾಹನಗಳನ್ನು ಒದಗಿಸಲು ಅರ್ಹ ಸಂಸ್ಥೆಗಳಿ0ದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 08 ವಾಹನಗಳನ್ನು ತಾಲೂಕು ಮಟ್ಟದಲ್ಲಿ ಸಂಚಾರಿ ಆರೋಗ್ಯ ತಂಡಗಳಿಗೆ ಸರಬರಾಜು ಮಾಡಬೇಕಾಗಿದ್ದು, 2025ರ ನವಂಬರ್‌ನಿAದ 2026ರವರೆಗೆ ಸೇವೆಯನ್ನು ಒದಗಿಸಬೇಕಾಗಿದ್ದು, ಆಸಕ್ತ ಸಂಸ್ಥೆಗಳು ವೆಬ್‌ಸೈಟ್ ವಿಳಾಸ: https://kppp.karnataka.gov.in ನಲ್ಲಿ ಅಕ್ಟೋಬರ್ 24ರ ಸಂಜೆ 5.30ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಡಿ.ಪಿ.ಎಂ.ಯು ವಿಭಾಗಕ್ಕೆ ಕಚೇರಿಯ ಸಮಯದಲ್ಲಿ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸದಸ್ಯ ಕಾರ್ಯದರ್ಶಿಗಳಾದ ಡಾ. ನಂದಿತಾ ಎಂ.ಎನ್ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್