ಜ್ಯೂರಿಕ್, 19 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸುಪರ್‌ಕಂಡಕ್ಟಿಂಗ್ ಕ್ಯೂಬಿಟ್ ಮತ್ತು ಟ್ರಾಪ್ಡ್ ಐಯಾನ್ ಸಿಸ್ಟಮ್ಸ್‌ಗಳ ಕುರಿತ ಸಂಶೋಧನೆಯಲ್ಲಿ ಇಪ್ಪತ್ತು ವರ್ಷಗಳಿಂದ ಪಯೋನಿಯರ್‌ಗಳಾಗಿ ಗುರುತಿಸಿಕೊಂಡಿರುವಂತಹ, ETH Zurich ಕ್ವಾಂಟಮ್ ಸೆಂಟರ್ ನ ನಿರ್ದೇಶಕರುಗಳಾದ ವಿಶ್ವವಿಖ್ಯಾತ ಪ್ರೊ. ಆಂಡ್ರಿಯಾಸ್ ವಾಲ್ರಾಫ್ ಹಾಗೂ ಪ್ರೊ. ಜೊನಥನ್ ಹೋಮ್ ಮತ್ತು ಪ್ರೊ. ಕ್ಲಾಸ್ ಎನ್ಸ್‌ಸ್ಲಿನ್ ಅವರನ್ನು ಮುಂದಿನ ಕ್ವಾಂಟಮ್ ಇಂಡಿಯಾ ಸಮ್ಮೇಳನದಲ್ಲಿ ಭಾಗವಹಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಆಹ್ವಾನಿಸಿದ್ದಾರೆ.
ವಿಶ್ವದ ಅಗ್ರಗಣ್ಯ ವಿಜ್ಞಾನ ಸಂಸ್ಥೆಯಾದ ETH Zurich-ನ ಕ್ವಾಂಟಮ್ ಸೆಂಟರ್‌ಗೆ ಭೇಟಿ ನೀಡಿದ ಅವರು, ಕ್ವಾಂಟ್‌ಮ್ ಕ್ಷೇತ್ರದಲ್ಲಿ ಆಗಿರುವಂತಹ ಸಂಶೋಧನೆಗಳ ಬಗ್ಗೆ ವಿಸ್ತ್ರುತ ಮಾಹಿತಿ ಪಡೆದುಕೊಂಡರು.
“ETH Zurich ಕೇಂದ್ರವು ಆಧುನಿಕ ಕ್ವಾಂಟಮ್ ಕಂಪ್ಯೂಟಿಂಗ್‌ನ ಜನ್ಮಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ಸಂಶೋಧನೆಯಿಂದಲೇ ಕ್ವಾಂಟಮ್ ವಿಜ್ಞಾನವು ಸೈದ್ಧಾಂತಿಕ ಹಂತದಿಂದ ನಿಜವಾದ ತಂತ್ರಜ್ಞಾನ ಹಂತಕ್ಕೆ ತಲುಪಿದೆ. ಕರ್ನಾಟಕ ರಾಜ್ಯದಲ್ಲಿ ಉದಯವಾಗುತ್ತಿರುವ ಕ್ವಾಂಟಮ್ ಪರಿಸರವನ್ನು ಇಂತಹ ವಿಶ್ವದರ್ಜೆಯ ಪರಿಣಿತರೊಂದಿಗೆ ಸಂಪರ್ಕಿಸುವುದು ನಮಗೆ ಹೆಮ್ಮೆಯ ವಿಷಯವಾಗಿದೆ,” ಎಂದು ಸಚಿವ ಬೋಸರಾಜು ಹೇಳಿದರು.
ಕರ್ನಾಟಕ ತಂಡವು ಸುಪರ್‌ಕಂಡಕ್ಟಿಂಗ್ ಕ್ಯೂಬಿಟ್ ಲ್ಯಾಬ್ ಮತ್ತು ಟ್ರಾಪ್ಡ್ ಐಯಾನ್ ಲ್ಯಾಬ್‌ಗಳಿಗೆ ಭೇಟಿ ನೀಡಿ, ಸ್ವಿಟ್ಜರ್ಲ್ಯಾಂಡ್‌ನಾದ್ಯಂತ ಸಂಶೋಧನಾ ಸಹಭಾಗಿತ್ವವನ್ನು ETH ಕ್ವಾಂಟಮ್ ಸೆಂಟರ್ ಹೇಗೆ ಒಂದು ಮಾದರಿಯಾಗಿ ಸಮನ್ವಯಗೊಳಿಸುತ್ತಿದೆ ಎಂಬುದನ್ನು ತಿಳಿದುಕೊಂಡಿತು. ETH-ನ ಈ ಮಾದರಿಯನ್ನು ಅನುಸರಿಸಿ ಕರ್ನಾಟಕ ಸರ್ಕಾರವು ಬೆಂಗಳೂರಿನ Q-City ಯಲ್ಲಿ ಸಂಶೋಧನೆ ಮತ್ತು ನವೋತ್ಪಾದನೆಯ ಸಂಯೋಜಿತ ವೇದಿಕೆಯನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದೆ.
ಇದೇ ವೇಳೆ ETH ತಂಡವು, ತಮ್ಮ ಪ್ರಯೋಗಾಲಯಗಳಲ್ಲಿ ಅಭಿವೃದ್ಧಿಯಾದ ತಂತ್ರಜ್ಞಾನಗಳು ಹೇಗೆ ಯಶಸ್ವಿ ಕ್ವಾಂಟಮ್ ಸ್ಟಾರ್ಟಪ್‌ಗಳಾಗಿ ಬೆಳೆದಿವೆ ಎಂಬುದನ್ನು ಪ್ರದರ್ಶಿಸಿತು. ತಂಡವು Zurich Instruments ನಂತಹ ETH-ನಿಂದ ಹುಟ್ಟಿಕೊಂಡ ಕಂಪನಿಗೆ ಭೇಟಿ ನೀಡಿತು. ಈ ಕಂಪನಿ ವಿಶ್ವದಾದ್ಯಂತ, ಭಾರತ ಸೇರಿದಂತೆ, ಕ್ವಾಂಟಮ್ ಕಂಪ್ಯೂಟರ್‌ಗಳಿಗಾಗಿ ಅಂಪ್ಲಿಫೈಯರ್‌ಗಳು ಮತ್ತು ಸಿಗ್ನಲ್ ಸಿಸ್ಟಮ್‌ಗಳು ತಯಾರಿಸುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa