ಬೆಳೆಗಳಿಗೆ ರೋಗ ಭಾದೆ, ನಿರ್ವಹಣಾ ಕ್ರಮ
ಶಿವಮೊಗ್ಗ, 19 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಕೂರಿಗೆ ಮತ್ತು ನಾಟಿ ಮಾಡಿದ ಭತ್ತದ ಬೆಳೆಯು 45 ರಿಂದ 75 ದಿವಸಗಳವರೆಗಿನ ಅವಧಿಯ ಬೆಳೆ ಇದೆ. ಆದರ ಇತ್ತೀಚಿನ ದಿನಗಳಲ್ಲಿ ಬೀಳುತ್ತಿರುವ ತುಂತುರು ಮಳೆ ಹಾಗೂ ತಾಪಮಾನದಿಂದ ವಾತಾವರಣದಲ್ಲಿ ಹೆಚ್ಚಿನ ಆರ್
ಬೆಳೆಗಳಿಗೆ ರೋಗ ಭಾದೆ, ನಿರ್ವಹಣಾ ಕ್ರಮ


ಶಿವಮೊಗ್ಗ, 19 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಕೂರಿಗೆ ಮತ್ತು ನಾಟಿ ಮಾಡಿದ ಭತ್ತದ ಬೆಳೆಯು 45 ರಿಂದ 75 ದಿವಸಗಳವರೆಗಿನ ಅವಧಿಯ ಬೆಳೆ ಇದೆ. ಆದರ ಇತ್ತೀಚಿನ ದಿನಗಳಲ್ಲಿ ಬೀಳುತ್ತಿರುವ ತುಂತುರು ಮಳೆ ಹಾಗೂ ತಾಪಮಾನದಿಂದ ವಾತಾವರಣದಲ್ಲಿ ಹೆಚ್ಚಿನ ಆರ್ದ್ರತೆ ಉಂಟಾಗಿ ಅಲ್ಲಲ್ಲಿ ಕೀಟ ಮತ್ತು ರೋಗ ಭಾದೆಗಳನ್ನ ಕಂಡುಬರುತ್ತಿದ್ದು, ಸರಿಯಾಗಿ ನಿರ್ವಹಣಾ ಕ್ರಮಗಳನ್ನು ಅನುಸರಿಸುವ ಕ್ರಮದ ಮಾಹಿತಿಯನ್ನು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೆಶಕರು ರೈತರಿಗೆ ನೀಡಿದ್ದಾರೆ

ಎಲೆ ಸುರುಳಿ ಹುಳು /ಕೊಳವೆ ಹುಳು ಈ ಹುಳುಗಳು ಮಡಚಿ ಕೊಳವೆ ಕೋಶದಲ್ಲಿ ಎಲೆಯನ್ನು ತಿನ್ನುತ್ತವೆ. ಸಾರಜನಕದ ಉಪಯೋಗವನ್ನು ಕಡಿಮೆಗೊಳಿಸಿ ಹಾಗೂ ಬದುಗಳನ್ನು ಸ್ವಚ್ಛಗೊಳಿಸುವುದು. ಕ್ವಿನಾಲ್ ಫಾಸ್ 2 ಮಿಲೀ ಅಥವಾ ಇಂಡಾಕ್ಸಿ ಕಾರ್ಬ್ 14.5 ಎಸ್‌ಸಿ 0.5 ಮಿಲಿ ಪ್ರತಿ ಲೀ ನೀರಿಗೆ ಬೆರೆಸಿ ಸಿಂಪಡಣೆ ಕೈಗೊಳ್ಳುವ ಮೂಲಕ ಹುಳುಗಳನ್ನು ಹತೋಟಿಗೆ ತರಬಹುದು.

ಹೆಚ್ಚಿನ ಮಾಹಿತಿಗಾಗಿ ರೈತರ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande