ಶಿವಮೊಗ್ಗ, 19 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಶಿವಮೊಗ್ಗ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2025-26 ನೇ ಸಾಲಿನ ನವೆಂಬರ್‌ನಲ್ಲಿ “ಕಲಾಪ್ರತಿಭೋತ್ಸವ” ಆಯೋಜಿಸಿದ್ದು, ಕಲಾಪ್ರಕಾರದ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕಲಾಪ್ರಕಾರದ ಸ್ಪರ್ಧೆಗಳಲ್ಲಿ ಭಾಗವಹಿಸುವ ಬಾಲಪ್ರತಿಭೆಗೆ 8 ರಿಂದ 13 ವರ್ಷ, ಕಿಶೋರ ಪ್ರತಿಭೆಗೆ 14 ರಿಂದ 18 ವರ್ಷ, ಯುವ ಪ್ರತಿಭೆಗೆ 19 ರಿಂದ 30 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದ್ದು, ವಯಸ್ಸಿನ ದಾಖಲೆಗಾಗಿ ಶಾಲೆ/ ಕಾಲೇಜಿನಿಂದ ದೃಢೀಕರಿಸಿದ ಪತ್ರ ಹಾಗೂ ವಿದ್ಯಾರ್ಥಿಗಳಲ್ಲದಿದ್ದಲ್ಲಿ ನಗರಸಭೆ/ ಪಂಚಾಯಿತಿಯಿಂದ ದೃಢೀಕರಣ ಪತ್ರ ಪಡೆದು ಸಲ್ಲಿಸಬೇಕು.
ಒಬ್ಬರು ಒಂದೇ ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದ್ದು, ಕೈ ಬರಹದ ಅರ್ಜಿಯ ಮೂಲಕ ತಾವು ಭಾಗವಹಿಸುವ ಸ್ಪರ್ಧೆಯ ವಿವರದೊಂದಿಗೆ ವಯಸ್ಸಿನ ದಾಖಲಾತಿಯನ್ನು ಸೇರಿಸಿ ಅ.31 ರೊಳಗೆ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ರಂಗಮಂದಿರ ಇವರಿಗೆ ಸಲ್ಲಿಸಬೇಕೆಂದು ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಬಾಲಪ್ರತಿಭೆ, ಕಿಶೋರ ಪ್ರತಿಭೆಯ ಸ್ಪರ್ಧಾ ಪ್ರಕಾರಗಳು: ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಚಿತ್ರಕಲೆ, ಜಾನಪದ ಗೀತೆ, ಹಿಂದೂಸ್ತಾನಿ, ಕರ್ನಾಟಕ ವಾದ್ಯ ಸಂಗೀತ, ಹಿಂದೂಸ್ತಾನಿ, ಕರ್ನಾಟಕ ಸಂಗೀತ ಹಾಡುಗಾರಿಕೆ
ಯುವ ಪ್ರತಿಭೆಯ ಸ್ಪರ್ಧಾಪ್ರಕಾರಗಳು- ನನ್ನ ನೆಚ್ಚಿನ ಸಾಹಿತಿ(ಆಶು ಭಾಷಣ), ಶಾಸ್ತ್ರೀಯ ನೃತ್ಯ, ಸಗುಮ ಸಂಗೀತ, ಚಿತ್ರಕಲೆ, ಹಿಂದೂಸ್ತಾನಿ/ಕರ್ನಾಟಕ ಸಂಗೀತ ಹಾಡುಗಾರಿಕೆ, ಹಿಂದೂಸ್ತಾನಿ/ಕರ್ನಾಟಕ ವಾದ್ಯ ಸಂಗೀತ, ನಾಟಕ(ಸಮೂಹ).
ಹಿಂದೂಸ್ತಾನ್ ಸಮಾಚಾರ್ / Rakesh Mahadevappa