ರಾಯಚೂರು : ಜಿಪಂ ಸಿಇಓ ಸಂಚಾರ, ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿ ಪರಿಶೀಲನೆ
ರಾಯಚೂರು, 18 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ್ ಕಾಂದೂ ಅವರು ಕಾರ್ಯದೊತ್ತಡದ ಮಧ್ಯೆಯೂ ಅಕ್ಟೋಬರ್ 17ರಂದು ಜಿಲ್ಲಾ ಪಂಚಾಯತನ ಆಡಳಿತ ಭವನದಲ್ಲಿನ ವಿವಿಧೆಡೆ ಸಂಚರಿಸಿ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯ ನಿರ್ವಹಣೆಯ ಬಗ್ಗೆ ಪರಿಶೀಲಿಸಿದ
ರಾಯಚೂರು : ಜಿಪಂ ಸಿಇಓ ಸಂಚಾರ: ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿ ಪರಿಶೀಲನೆ


ರಾಯಚೂರು : ಜಿಪಂ ಸಿಇಓ ಸಂಚಾರ: ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿ ಪರಿಶೀಲನೆ


ರಾಯಚೂರು : ಜಿಪಂ ಸಿಇಓ ಸಂಚಾರ: ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿ ಪರಿಶೀಲನೆ


ರಾಯಚೂರು : ಜಿಪಂ ಸಿಇಓ ಸಂಚಾರ: ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿ ಪರಿಶೀಲನೆ


ರಾಯಚೂರು, 18 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ್ ಕಾಂದೂ ಅವರು ಕಾರ್ಯದೊತ್ತಡದ ಮಧ್ಯೆಯೂ ಅಕ್ಟೋಬರ್ 17ರಂದು ಜಿಲ್ಲಾ ಪಂಚಾಯತನ ಆಡಳಿತ ಭವನದಲ್ಲಿನ ವಿವಿಧೆಡೆ ಸಂಚರಿಸಿ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯ ನಿರ್ವಹಣೆಯ ಬಗ್ಗೆ ಪರಿಶೀಲಿಸಿದ್ದಾರೆ.

ಜಿಲ್ಲಾ ಪಂಚಾಯತನ ಕಚೇರಿಯಲ್ಲಿರುವ ಸ್ಟೋರ್ ರೂಂ, ಆಡಳಿತ ಶಾಖೆ, ಲೆಕ್ಕಪತ್ರ ಶಾಖೆ, ಲೆಕ್ಕ ಶಾಖೆ, ಎನ್.ಆರ್.ಎಲ್.ಎಂ., ಸ್ವಚ್ಚಭಾರತ ಮೀಷನ್ ಯೋಜನೆಯ ಕಚೇರಿ ಸೇರಿದಂತೆ ವಿವಿಧೆಡೆ ಖುದ್ದು ತೆರಳಿ ಅಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯ ಜೊತೆಗೆ ಮಾತನಾಡಿ ಅವರ ಕಾರ್ಯವೈಖರಿಯ ಬಗ್ಗೆ ಪರಿಶೀಲಿಸಿದರು. ಶಿಸ್ತನ್ನು ಕಾಯ್ದುಕೊಳ್ಳಲು ಸಲಹೆ ಮಾಡಿದರು.

ಕಚೇರಿಯಲ್ಲಿ, ಯಾವುದೇ ಕಡತಗಳು ಎಲ್ಲೆಂದರಲ್ಲಿ ಕಾಣಬಾರದು. ಅವುಗಳನ್ನು ಅನುಕ್ರಮವಾಗಿ ಜೋಡಿಸಿಡಬೇಕು. ಅವಶ್ಯಕ ಸಂದರ್ಭದಲ್ಲಿ ಯಾವುದೇ ಕಡತವು ತಕ್ಷಣ ಕೈಗೆ ಸಿಗುವ ಹಾಗೆ ಕಡತಗಳನ್ನು ಆದ್ಯತೆನುಸಾರ ಜೋಡಣೆ ಮಾಡಿ ಪ್ರತಿನಿತ್ಯ ಕಾರ್ಯನಿರ್ವಹಿಸಬೇಕು. ಕಡತಗಳ ರಕ್ಷಣೆಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಸಲಹೆ ಮಾಡಿದರು.

ಯಾವುದೇ ಕಚೇರಿಯಲ್ಲಿ ಆವಕ ಜಾವಕ ವಹಿಗಳ ನಿರ್ವಹಣೆ ಅತ್ಯಗತ್ಯವಾಗಿದೆ.

ಈ ಬಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗಮನ ಹರಿಸಬೇಕು. ಯಾವುದೇ ಶಾಖೆಯಲ್ಲಿ ಪತ್ರಗಳನ್ನು, ಕಡತಗಳನ್ನು ಎಲ್ಲೆಂದರಲ್ಲಿ ಹರಡಬಾರದು. ಕಡತಗಳ ರಕ್ಷಣೆ ಮತ್ತು ನಿರ್ವಹಣೆಯಲ್ಲಿ ಯಾರಾದರು ಲೋಪ ಎಸಗುವುದು ಕಂಡು ಬ0ದಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದೆ ವೇಳೆ ಸಿಇಓ ಅವರು ಶಿಶುಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳ ಯೋಗಕ್ಷೇಮ ಮತ್ತು ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.

ಈ ವೇಳೆ ಜಿಲ್ಲಾ ಪಂಚಾಯತನ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಮುಖ್ಯ ಯೋಜನಾಧಿಕಾರಿ ಡಾ.ಟಿ ರೋಣಿ, ಗ್ರಾ.ಕು.ನೀ ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸೇರಿದಂತೆ ವಿವಿಧ ಯೋಜನೆಯ ಅಧಿಕಾರಿ ಸಿಬ್ಬಂದಿ ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande