ಸಾಹಿತ್ಯ ಅಧ್ಯಯನದಿಂದ ಜ್ಞಾನದ ಸಾಕ್ಷಾತ್ಕಾರ : ಕುಲಸಚಿವ ಎಸ್.ಜಿ. ಡೊಳ್ಳೆಗೌಡರ್
ಕೊಪ್ಪಳ, 18 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಪ್ರಸ್ತುತ ಲೇಖಕರ ಜೊತೆಗೆ ಮಿಮರ್ಶಕರ ಅಗತ್ಯವಿದೆ ಎಂದು ಕಲ್ಬುರ್ಗಿಯ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾದ ಎಸ್.ಜಿ. ಡೊಳ್ಳೆಗೌಡರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್ ಹಾಗೂ ಮಹಾ
ಸಾಹಿತ್ಯ ಅಧ್ಯಯನದಿಂದ ಜ್ಞಾನದ ಸಾಕ್ಷಾತ್ಕಾರ :  ಕುಲಸಚಿವ ಎಸ್.ಜಿ. ಡೊಳ್ಳೆಗೌಡರ್


ಸಾಹಿತ್ಯ ಅಧ್ಯಯನದಿಂದ ಜ್ಞಾನದ ಸಾಕ್ಷಾತ್ಕಾರ :  ಕುಲಸಚಿವ ಎಸ್.ಜಿ. ಡೊಳ್ಳೆಗೌಡರ್


ಕೊಪ್ಪಳ, 18 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪ್ರಸ್ತುತ ಲೇಖಕರ ಜೊತೆಗೆ ಮಿಮರ್ಶಕರ ಅಗತ್ಯವಿದೆ ಎಂದು ಕಲ್ಬುರ್ಗಿಯ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾದ ಎಸ್.ಜಿ. ಡೊಳ್ಳೆಗೌಡರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್ ಹಾಗೂ ಮಹಾವಿದ್ಯಾಲಯದ ಸಹಯೋಗದೊಂದಿಗೆ ಆಂತರಿಕ ಗುಣಮಟ್ಟ ಭರವಸೆ ಕೋಶದ ಅಡಿಯಲ್ಲಿ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ನಡೆದ ‘ಡಾ. ಶಿವರಾಮ ಕಾರಂತರ ಸಾಹಿತ್ಯ ಮತ್ತು ವೈಚಾರಿಕತೆ’ ವಿಷಯದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉಧ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯವನ್ನು ಮೌಲ್ಯಮಾಪನ ಮಾಡುವ ಕಾರ್ಯ ನಿರಂತರವಾಗಿರಬೇಕು. ದಶಕಗಳ ಹಿಂದೆ ಜನಿಸಿ, ಸಾಹಿತ್ಯ ರಚಿಸಿದ್ದ ಡಾ. ಕೆ. ಶಿವರಾಮ ಕಾರಂತರ ಸಾಹಿತ್ಯ ಮತ್ತು ಅವರ ಬದುಕು ಪ್ರಸ್ತುತಕ್ಕೂ ಅನ್ವಯವಾಗುತ್ತದೆ. ಸಾಹಿತ್ಯ ಓದುವುದರಿಂದ ಜೀವನ ಸಾಕ್ಷಾತ್ಕಾರ ಆಗಲಿದೆ. ಮೌಲ್ಯಾಧಾರಿತ – ಆದರ್ಶದ ಬದುಕು ರೂಪುಗೊಳ್ಳಲಿದೆ ಎಂದರು.

ಡಾ. ಶಿವರಾಮ ಕಾರಂತ ಟ್ರಸ್ಟ್‍ನ ಅಧ್ಯಕ್ಷರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರು, ಕಾಲದ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳಬೇಕು. ಸಾಹಿತ್ಯದಲ್ಲಿ ಬಹುಶಿಸ್ತಿನ ಅಧ್ಯಯನದ ಅಗತ್ಯವಾಗಿದೆ. ಕಾರಾಂತರ ಸಾಹಿತ್ಯ ಮತ್ತು ಅವರ ಸಾಹಿತ್ಯದ ಒಳನೋಟಗಳನ್ನು ನಾವು ಅಧ್ಯಯನ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್‍ನ ಕಾರ್ಯದರ್ಶಿಗಳಾದ ಡಾ. ಆರ್. ಮರೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಶಿವರಾಮ ಕಾರಾಂತರು ಜ್ಞಾನದ ಗಣಿ. ಲೋಕದ ಅಪೂರ್ವ ಜ್ಞಾನ ಸಂಪತ್ತು ಅವರ ಸಾಹಿತ್ಯದಲ್ಲಿದೆ ಎಂದರು.

ಡಾ. ಶಿರಾಮ ಕಾರಾಂತ ಟ್ರಸ್ಟನ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಪೂರ್ಣಿಮಾ, ಕೊಪ್ಪಳದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಅವರು ವೇದಿಕೆಯಲ್ಲಿದ್ದರು.

`ಡಾ. ಶಿವರಾಮ ಕಾರಂತರ ಸಾಹಿತ್ಯದಲ್ಲಿ ಪರಿಸರ ಮತ್ತು ವೈಚಾರಿಕ ಪ್ರಜ್ಞೆ’ ವಿಷಯದ ಕುರಿತು ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪಾಧ್ಯಾಪಕರಾದ ಡಾ. ಮಹಾಂತೇಶ ಪಾಟೀಲ ಅವರು ಮಾತನಾಡಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಕುಂದಾಪುರ ಡಾ. ಬಿ.ಬಿ. ಹೆಗ್ಡೆ ಪ್ರಥಮದರ್ಜೆ ಕಾಲೇಜಿನ ಉಪಪ್ರಾಚಾರ್ಯ ಡಾ. ಚೇತನ್ ಶಟ್ಟಿ ಕೋವಾಡಿ ಅವರು ವಹಿಸಿಕೊಂಡಿದ್ದರು.

‘ಡಾ. ಶಿವರಾಮ ಕಾರಂತರ ಕಾದಂಬರಿಗಳು : ಮಹಿಳೆ-ವೈಚಾರಿಕತೆ’ ವಿಷಯದ ಕುರಿತು ಕೇರಳ ಕಾಸರಗೂಡಿನ ಕೇಂದ್ರಿಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಗೊವಿಂದರಾಜು ಕಲ್ಲೂರ ಅವರು ವಿಷಯ ಮಂಡಿಸಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಹಿರೇಕೆರೂರ ಬಿ.ಆರ್.ಟಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ನಾನಾಸಾಹೇಬ ಹಚ್ಚಡದ ಅವರು ವಹಿಸಿಕೊಂಡಿದ್ದರು.

ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಬಸಂತಪ್ಪ ಹೊಸಳ್ಳಿ, ಉಡುಪಿಯ ಡಾ. ಶಿರಾಮ ಕಾರಂತ ಟ್ರಸ್ಟನ ಸದಸ್ಯರಾದ ಸಂತೋಷ ನಾಯಕ ಪಟ್ಲಾ, ಪ್ರೊ. ಶರಣಬಸಪ್ಪ ಬಿಳಿಯಲೆ, ಡಾ. ದಯಾನಂದ ಸಾಳುಂಕೆ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಚನ್ನಬಸವ, ಐಕ್ಯೂಎಸಿ ಸಂಯೋಜಕ ಡಾ. ಅರುಣಕುಮಾರ, ಉಪಪ್ರಾಚಾರ್ಯ ಡಾ. ಕರಿಬಸವೇಶ್ವರ, ಪ್ರಾಧ್ಯಾಪಕರಾದ ಡಾ. ಸುಂದರ ಮೇಟಿ, ಡಾ. ಪ್ರಶಾಂತ ಕೊಂಕಲ್, ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್, ಡಾ. ಯಮನೂರಪ್ಪ, ಲಲಿತಾ ಕಿನ್ನಾಳ, ವಿನೋದ ಮುದಿಬಸನನಗೌಡರ, ಮಹೇಶ ಬಿರಾದಾರ, ಶರಣಪ್ಪ ಚೌಹಾಣ್, ಡಾ. ಶಿವಪ, ಶರಣಪ್ಪ ಗುಳಗುಳಿ, ಮಂಜುನಾಥ ಹಿರೇಮಠ, ವೆಂಕಟೇಶ ಬೋವಿ, ಸ್ವಾತಿ ಹಿರೇಮಠ, ಪ್ರತಿಭಾ ಚಿತ್ರಗಾರ, ಸಂಗೀತಾ ಮಸ್ಕಿ, ಪ್ರಿಯ ಪತ್ತಾರ, ಶ್ವೇತಾ ಗಿರಡ್ಡಿ, ಮಹಾಂತೇಶ ತವಳಗೇರಿ ಉಪಸ್ಥಿತರಿದ್ದರು.

ವಿಚಾರ ಸಂಕಿರಣದ ಸಂಘಟಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ದಂಡೋತಿ ಪ್ರಾಸ್ತಾವಿಕವಾಗಿ ಮಾತನಡಿದರು, ಡಾ. ಸುಮಲತಾ ಬಿ.ಎಂ. ಕಾರ್ಯಕ್ರಮ ನಿರೂಪಸಿದರು, ಮಂಜುಶ್ರೀ ಅವರು ಪ್ರಾರ್ಥಿಸಿದರು, ಡಾ. ನಾಗೇಶ ಅವರು ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande