ಹಾಸನಾಂಬೆ ದರ್ಶನಕ್ಕೆ ಭಕ್ತರ ಮಹಾಸಾಗರ
ಹಾಸನ, 18 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಹಾಸನಾಂಬೆ ದೇವಿಯ ದರ್ಶನಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಹಾಸನಕ್ಕೆ ಧಾವಿಸುತ್ತಿದ್ದಾರೆ. ವಾರಾಂತ್ಯ ಮತ್ತು ದೀಪಾವಳಿ ರಜೆಗಳ ಹಿನ್ನೆಲೆ ಭಕ್ತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಜನಸಂದಣಿ ನಿಯಂತ್ರಿಸಲು ತಾತ್ಕಾಲಿಕ ಕ್ರಮವಾಗಿ
Haasnambe


ಹಾಸನ, 18 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಹಾಸನಾಂಬೆ ದೇವಿಯ ದರ್ಶನಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಹಾಸನಕ್ಕೆ ಧಾವಿಸುತ್ತಿದ್ದಾರೆ. ವಾರಾಂತ್ಯ ಮತ್ತು ದೀಪಾವಳಿ ರಜೆಗಳ ಹಿನ್ನೆಲೆ ಭಕ್ತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಜನಸಂದಣಿ ನಿಯಂತ್ರಿಸಲು ತಾತ್ಕಾಲಿಕ ಕ್ರಮವಾಗಿ ಬೆಂಗಳೂರು-ಹಾಸನ ಮಾರ್ಗದ ಕೆಎಸ್‌ಆರ್‌ಟಿಸಿ ವಿಶೇಷ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಅದೇ ರೀತಿಯಲ್ಲಿ, ಹಾಸನಾಂಬೆ ದರ್ಶನದ ಟಿಕೆಟ್‌ ಬುಕಿಂಗ್‌ ಕೂಡ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಹಾಸನಾಂಬೆ ದೇವಾಲಯ ಮತ್ತು ಸುತ್ತಮುತ್ತ ಭಕ್ತರ ಮಹಾಸಾಗರ ನೆರೆದಿದ್ದು, ದರ್ಶನಕ್ಕಾಗಿ ಕಿಲೋಮೀಟರ್‌ಗಟ್ಟಲೆ ಸರತಿ ಸಾಲುಗಳು ರೂಪುಗೊಂಡಿವೆ.

ಭಕ್ತರ ಸುರಕ್ಷತೆ ಹಾಗೂ ದರ್ಶನದ ಸುವ್ಯವಸ್ಥೆಗಾಗಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಹಾಸನದಲ್ಲಿ ನಿಯೋಜಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande