ಕುರುಗೋಡು ಪುರಸಭೆ : ಸ್ವ-ಸಹಾಯಕ ಗುಂಪುಗಳ ಸದಸ್ಯರ ನೇಮಕ
ಕುರುಗೋಡು, 18 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕುರುಗೋಡು ಪುರಸಭೆಯ ಸ್ವಚ್ಛ ಭಾರತ್ ಮಿಷನ್-2.0 ಯೋಜನೆಯ ಐ.ಇ.ಸಿ ಘಟಕದಡಿ ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿ ಇರುವ ಹಾಗೂ ನಿರ್ವಹಿಸುವ ಸ್ವ-ಸಹಾಯ ಗುಂಪುಗಳಿ0ದ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಕುರುಗೋಡು ಪುರಸಭೆಯ
ಕುರುಗೋಡು ಪುರಸಭೆ : ಸ್ವ-ಸಹಾಯಕ ಗುಂಪುಗಳ ಸದಸ್ಯರ ನೇಮಕ


ಕುರುಗೋಡು, 18 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕುರುಗೋಡು ಪುರಸಭೆಯ ಸ್ವಚ್ಛ ಭಾರತ್ ಮಿಷನ್-2.0 ಯೋಜನೆಯ ಐ.ಇ.ಸಿ ಘಟಕದಡಿ ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿ ಇರುವ ಹಾಗೂ ನಿರ್ವಹಿಸುವ ಸ್ವ-ಸಹಾಯ ಗುಂಪುಗಳಿ0ದ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಕುರುಗೋಡು ಪುರಸಭೆಯ ಮುಖ್ಯಾಧಿಕಾರಿ ಅವರು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾಹರ್ತೆ ಹೊಂದಿರಬೇಕು. ಕನ್ನಡ ಮಾತನಾಡಲು, ಬರೆಯಲು ಬರಬೇಕು. ಸ್ವ-ಸಹಾಯಕ ಗುಂಪಿನಲ್ಲಿ ಕಾರ್ಯ ನಿರ್ವಹಿಸಿರುವ ಬಗ್ಗೆ ನಲ್ಮ್/ಭಾರತ/ಕರ್ನಾಟಕ ಸರ್ಕಾರದಿಂದ ಸೂಕ್ತ ದಾಖಲೆಗಳನ್ನು ಹೊಂದಿರಬೇಕು. ಅರ್ಜಿದಾರರು ಕಂಪ್ಯೂಟರ್ ಸಾಕ್ಷರತೆಯ ಎಮ್‌ಎಸ್ ಆಫೀಸ್ ಮತ್ತು ಎಕ್ಸ್ಎಲ್ ನಲ್ಲಿ ನಿರ್ವವಹಿಸಿರುವ ಬಗ್ಗೆ ಕನ್ನಡ ಮತ್ತು ಆಂಗ್ಲದಲ್ಲಿ ಪರಿಣಿತರಾಗಿಬೇಕು.

ಮಾಹಿತಿ ಶಿಕ್ಷಣ ಸಂವಾಹನದಡಿ ಗ್ರಾಮ ಪಂಚಾಯತಿ ಅಥವಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವವುಳ್ಳ ಅಭ್ಯರ್ಥಿಗಳನ್ನು ಆದ್ಯತೆ ಮೇರೆಗೆ ಆಯ್ಕೆ ಮಾಡಲಾಗುವುದು.

ಅರ್ಜಿಗಳನ್ನು ಕುರುಗೋಡು ಪುರಸಭೆ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಇದೇ ಕಚೇರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 02 ಕೊನೆಯ ದಿನ.

ಹೆಚ್ಚಿನ ಮಾಹಿತಿಗಾಗಿ ಕುರುಗೋಡು ಪುರಸಭೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande