ಚಿತ್ತಾಪುರ ಭಾರತದಲ್ಲಿದೆಯೋ ಅಥವಾ ಖರ್ಗೆ ಕುಟುಂಬದ ರಿಪಬ್ಲಿಕ್ ಆಗಿದೆಯೋ : ಆರ್.ಅಶೋಕ
ಬೆಂಗಳೂರು, 18 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಪ್ರತಿಪಕ್ಷ ನಾಯಕ ಆರ್. ಅಶೋಕ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಖರ್ಗೆ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ. ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಅನುಮತಿ ಪಡೆದಿದ್ದರೂ ಸಹ ಅಧಿಕಾರಿಗಳು ಕೇಸರಿ ಧ್ವಜ, ಬ್ಯಾನರ್ ತೆರವುಗೊಳಿಸಿರುವುದಕ್ಕೆ ಅವರು
Ashok


ಬೆಂಗಳೂರು, 18 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪ್ರತಿಪಕ್ಷ ನಾಯಕ ಆರ್. ಅಶೋಕ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಖರ್ಗೆ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ. ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಅನುಮತಿ ಪಡೆದಿದ್ದರೂ ಸಹ ಅಧಿಕಾರಿಗಳು ಕೇಸರಿ ಧ್ವಜ, ಬ್ಯಾನರ್ ತೆರವುಗೊಳಿಸಿರುವುದಕ್ಕೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಶೋಕ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಚಿತ್ತಾಪುರ ಭಾರತದಲ್ಲಿದೆಯೋ ಅಥವಾ ಖರ್ಗೆ ಕುಟುಂಬದ ರಿಪಬ್ಲಿಕ್ ಆಗಿದೆಯೋ ಎಂದು ಪ್ರಶ್ನಿಸಿದ್ದಾರೆ. ಪುರಸಭೆಯಿಂದಲೇ ಪಥಸಂಚಲನಕ್ಕೆ ಅನುಮತಿ ಪಡೆದುಕೊಂಡಿದ್ದೇವೆ. ಬ್ಯಾನರ್ ಹಾಕಲು ಜಾಹೀರಾತು ತೆರಿಗೆ ಕಟ್ಟಿ ರಸೀದಿಯೂ ಪಡೆದಿದ್ದೇವೆ. ಇಷ್ಟಾದರೂ ರಾತ್ರೋರಾತ್ರಿ ಕೇಸರಿ ಧ್ವಜ, ಬ್ಯಾನರ್ ತೆರವುಗೊಳಿಸಿರುವುದು ಏಕೆ?” ಎಂದು ಪ್ರಶ್ನಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದು,

“ಖರ್ಗೆ ಅವರೇ, ನೀವು ಚಿತ್ತಾಪುರದ ನಿಜಾಮಾ ಅಥವಾ ರಜಾಕರಾ? ಆರ್‌ಎಸ್ಎಸ್‌ ವಿರುದ್ಧ ವಿಷಕಾರುವುದರಿಂದ ನಕಲಿ ಗಾಂಧಿಗಳನ್ನು ಮೆಚ್ಚಿಸಬಹುದು ಎಂದುಕೊಳ್ಳಬೇಡಿ. ಚಿತ್ತಾಪುರವನ್ನು ಖರ್ಗೆ ರಿಪಬ್ಲಿಕ್‌ಗಾಗಿಸುವ ಕನಸು ಕಾಣಬೇಡಿ. ಈ ತುರ್ತು ಪರಿಸ್ಥಿತಿ ಆಟ ಜಾಸ್ತಿ ದಿನ ನಡೆಯೋದಿಲ್ಲ,” ಎಂದು ಎಚ್ಚರಿಕೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande