ಬಳ್ಳಾರಿ, 18 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ವಿ. ಲೋಕೇಶ್ ಅವರು ಅಕ್ಟೋಬರ್ 21ರಿಂದ 26ರವರೆಗೆ ಇಂಡೋನೇಷ್ಯಾದಲ್ಲಿ ನಡೆಯಲಿರುವ ಐಐಸಿಎಂಎ-2025 ಅಂತಾರಾಷ್ಟ್ರೀಯ ಸಮ್ಮೇಳನದ ಮುಖ್ಯ ಭಾಷಣಕಾರರಾಗಿ ಭಾಗವಹಿಸಲು ವಿದೇಶ ಪ್ರಯಾಣ ಮಾಡಲಿದ್ದಾರೆ.
ಪ್ರತಿಷ್ಠಿತ 37ನೇ ಆವೃತ್ತಿಯ ‘ಇಂಡೊ ಎಂಎಸ್’ ಅಂತಾರಾಷ್ಟ್ರೀಯ ಸಮ್ಮೇಳನವು ಇಂಡೋನೇಷ್ಯಾದ ಈಸ್ಟ್ ಜಾವಾದಲ್ಲಿರುವ ಜಂಬೆರ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.
ಜಂಬೆರ್ ವಿಶ್ವವಿದ್ಯಾಲಯದ ಜಾಂಗ್‍ಜಿಯಾನ್ ಮೆಥಮೆಟಿಕಲ್ ಸೊಸೈಟಿ ಮತ್ತು ಸಿಜಿಎಎನ್‍ಟಿ ರಿಸರ್ಚ್ ಗ್ರೂಪ್ ಸಹಭಾಗಿತ್ವದಲ್ಲಿ ಪ್ರತಿವರ್ಷ ಸಮ್ಮೇಳನವನ್ನು ಆಯೋಜಿಸುತ್ತದೆ.
ಟರ್ಕಿ, ಚೀನಾ, ದಕ್ಷಿಣ ಕೊರಿಯಾ, ಫ್ರಾನ್ಸ್ ದೇಶಗಳ ಖ್ಯಾತ ಗಣಿತಶಾಸ್ತ್ರ ಪ್ರಾಧ್ಯಾಪಕರುಗಳು ಮುಖ್ಯ ಭಾಷಣಕಾರರಾಗಿ ಮತ್ತು ಸುಮಾರು 50ಕ್ಕೂ ಅಧಿಕ ದೇಶಗಳ ಶೈಕ್ಷಣಿಕ ವಲಯದ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್