ಗಂಗಾವತಿ, 18 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅಕ್ಷರ ಪಬ್ಲಿಕ್ ಶಾಲೆಯಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಲಾಯಿತು. ವಿದ್ಯಾರ್ಥಿಗಳು ಅಲಂಕಾರಿಕ ಹಾಗೂ ಪುಷ್ಪಗಳಿಂದ ರಂಗೋಲಿ ಬಿಡಿಸಿ ಗಮನ ಸೆಳೆದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ರವಿಚೇತನ್ಯ ರೆಡ್ಡಿ ಮಾತನಾಡಿ ವರ್ಣರಂಜಿತ ಹಬ್ಬ ದೀಪಾವಳಿ ಬಂದಿದೆ. ದೇಶ ಒಂದೇ ಆದರೂ ನೂರು ವಿಭಿನ್ನ ಸಂಸ್ಕೃತಿಗಳು ನೆಲೆಗೊಂಡಿರುವ ಭಾರತದ ಯಾವುದೇ ಮೂಲೆಗೆ ಹೋದರೂ ದೀಪಾವಳಿ ವೈಭವ ಕಾಣಸಿಗುತ್ತದೆ. ಆದರೆ ಅದನ್ನು ಕರೆಯುವ, ಆಚರಿಸುವ ವಿಧಾನಗಳು ಮಾತ್ರ ತುಸು ಭಿನ್ನ. ಸಂಭ್ರಮ ಮಾತ್ರ ನಿತ್ಯನೂತನ.
ಹಣತೆ ಬೆಳಗಿಸಿ. ಮಾಲಿನ್ಯ ತಡೆಯಿರಿ, ಮಾಲಿನ್ಯಕಾರಿ ಪಟಾಕಿ ತ್ಯಜಿಸಿ, ಹಸಿರು ಪಟಾಕಿ ಬಳಸಿ, ಮಾಲಿನ್ಯ ಮುಕ್ತ ದೀಪಾವಳಿ ಆಚರಿಸಿ, ಹಸಿರು ದೀಪಾವಳಿ - ಪರಿಸರ ದೀಪಾವಳಿ, ಪರಿಸರ ಸ್ನೇಹಿ ದೀಪಾವಳಿ ಆಚರಿಸಿ ಮಾಲಿನ್ಯಮುಕ್ತ ದೀಪಾವಳಿ ಆಚರಣೆ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕಿಯರು ಅನೀತಾ, ವೈದೇಹಿ, ಶ್ವೇತಾ,ಸುಜಾತ,ಗಂಗಾ,ಜ್ಯೋತಿ ಅನ್ನಪೂರ್ಣ,ಭಾರತಿ ಸಿಬ್ಬಂದಿ ವರ್ಗ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್