ಗದಗ, 18 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಗದಗ ಇವರ ವತಿಯಿಂದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿಯಲ್ಲಿ ಅಂತಾರಾಷ್ಟ್ರೀಯ ಹೆಣ್ಣುಮಗುವಿನ ದಿನಾಚರಣೆ ಪ್ರಯುಕ್ತ ಜಾಗೃತಿ ಕಾರ್ಯಕ್ರಮವನ್ನು ಮಹಾವೀರ್ ಜೈನ್ ಹಿರಿಯ ಹಾಗೂ ಪ್ರೌಢ ಶಾಲೆ, ಗದಗ ಇಲ್ಲಿ ಹಮ್ಮಿಕೊಳ್ಳಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಪದ್ಮಾವತಿ ಜಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಕುರಿತಂತೆ ಅಂತರಾಷ್ಟ್ರೀಯ ಹೆಣ್ಣುಮಗುವಿನ ದಿನಾಚರಣೆಯ ಮಹತ್ವ ಹಾಗೂ ಲಿಂಗಾನುಪಾತ ಮತ್ತು ಲಿಂಗ ಸಮಾನತೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಡ್ವಕೇಟ್ ಕುಮಾರಿ ಮಧುಶ್ರೀ ಜಿ ಪೂಜಾರಿ ಇವರು ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಹಾಗೂ ಇತರೆ ಕಾನೂನು ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ಶ್ರೀಮತಿ ಸುಜಾತಾ ಮಠಪತಿ, ಆಡಳಿತಾಧಿಕಾರಿಗಳು ಸಖಿ ಒನ್ ಸ್ಟಾಪ್ ಸೆಂಟರ್ ಇವರು ಸಮಾಜದಲ್ಲಿ ಹೆಣ್ಣುಮಕ್ಕಳು ಹೆಚ್ಚು ಸೂಕ್ಷ್ಮ ದಿಂದ ಇರಬೇಕು ಹಾಗೂ ಯಾವುದೇ ಆಮಿಷಗಳಿಗೆ ಬಲಿಯಾಗಬಾರದೆಂದು ತಿಳಿಸಿದರು. ಶ್ರೀಮತಿ ಮಧುಶ್ರೀ ಪಿ ಉಪ್ಪಾರ ಜಂಡರ್ ಸ್ಪೆಷಲಿಸ್ಟ್ ಮಿಷನ್ ಶಕ್ತಿ ಯೋಜನೆ ಇವರು ಮಕ್ಕಳ ಸಹಾಯವಾಣಿ ಹಾಗೂ ಮಹಿಳಾ ಸಹಾಯವಾಣಿ ಕುರಿತು ಮಾಹಿತಿಯನ್ನು ನೀಡಿದರು
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಅನುಪಮಾ ಅಂಗಡಿ, ಅಧೀಕ್ಷಕಿ ಶ್ರೀಮತಿ ರೇಣುಕಾ ಮಾಗಡಿ, ಪೊಲೀಸ ಉಪಅಧೀಕ್ಷಕ ಶ್ರೀಯುತ ಮಹೇಶ ಹಾದಿಮನಿ, ಶ್ರೀಮತಿ ಶೈಲಜಾ ಧರಮ್‌ಸಿ, ಎಮ್ ಎಸ್ ತಿಪ್ಪಾಪುರ, ಶ್ರೀಮತಿ ಸುಜಾತಾ ಮಠಪತಿ, ಆಡಳಿತಾಧಿಕಾರಿಗಳು ಸಖಿ ಒನ್ ಸ್ಟಾಪ್ ಸೆಂಟರ್, ಶ್ರೀಮತಿ ಮಧುಶ್ರೀ ಪಿ ಉಪ್ಪಾರ ಜಂಡರ್ ಸ್ಪೆಷಲಿಸ್ಟ್ ಮಿಷನ್ ಶಕ್ತಿ ಯೋಜನೆ ಹಾಗೂ ಶಾಲೆಯ ಶಿಕ್ಷಕ ವೃಂದದವರು ಹಾಜರಿದ್ದರು. ಪೂಜಾ ಭರಮಗೌಡರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP