ವಿಜಯಪುರ, 17 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ವಿಶ್ವ ಅಂಗರಚನಾ ಶಾಸ್ತ್ರ ದಿನ ಅಂಗವಾಗಿ ನಗರದ ಬಿ.ಎಲ್.ಡಿ.ಇ ಡೀಮ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ಅಂಗರಚನಾ ಶಾಸ್ತ್ರ ವಿಭಾಗದಿಂದ ಸಪ್ತಾಹ ಆಚರಿಸಲಾಯಿತು.
ಈ ಸಪ್ತಾಹದ ಕೊನೆಯ ದಿನವಾದ ಇಂದು ಶುಕ್ರವಾರ ಡೀಮ್ಡ್ ವಿವಿಯಿಂದ ಶ್ರೀ ಸಿದ್ಧೇಶ್ವರ ದೇವಸ್ಥಾನದವರೆಗೆ ನಡೆದ ದೇಹದಾನದ ಮಹತ್ವ ಕುರಿತು ಜಾಗೃತಿ ಜಾಥಾಕ್ಕೆ ಕಾಲೇಜಿನ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ ಮತ್ತು ಹಿರಿಯ ಉಪಪ್ರಾಚಾರ್ಯ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರವಿ ಎಸ್. ಬುಲಗೌಡ, ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.
ಈ ಸಪ್ತಾಹದ ಅಂಗವಾಗಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗರಚನಾ ಶಾಸ್ತ್ರದ ಜಾಗತಿಕ ದೃಷ್ಠಿಕೋನ ವಿಷಯ ಕುರಿತು ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಮಂಗಳವಾರ ದೇಹದಾನ ಅರಿವು ಕುರಿತು ಭಿತ್ತಿಪತ್ರ ರಚನೆ ಸ್ಪರ್ಧೆ ನಡೆಯಿತು. ಬುಧವಾರ ದೇಹದಾನದ ಮಹತ್ವ ಕುರಿತು ಘೋಷವಾಕ್ಯ ರಚನೆ ಸ್ಪರ್ಧೆ ನಡೆಯಿತು. ಗುರುವಾರ ಎರಡೂ ಸ್ಪರ್ಧೆಗಳ ಫಲಿತಾಂಶವನ್ನು ಪ್ರಕಟಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande