ನೂತನ ನಿರ್ದೇಶಕರಿಗೆ ವಿಡಿಸಿಸಿ ಬ್ಯಾಂಕ್ ನಿಂದ ಸನ್ಮಾನ
ವಿಜಯಪುರ, 17 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರೆಲ್ಲರೂ ಯಾವುದೇ ಭಿನ್ನಾಭಿಪ್ರಾಯ ಇಲ್ಲದಂತೆ ಎಲ್ಲರೂ ಸಾಮರಸ್ಯದಿಂದ ಶ್ರೀಸಿದ್ದೇಶ್ವರ ಸಹಕಾರಿ ಬ್ಯಾಂಕ್ ನ್ನು ಅಭಿವೃದ್ಧಿ ಮಾಡಿ ಉನ್ನತಿಗೆ ಕೊಂಡೊಯ್ಯಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾ
ಸನ್ಮಾನ


ವಿಜಯಪುರ, 17 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರೆಲ್ಲರೂ ಯಾವುದೇ ಭಿನ್ನಾಭಿಪ್ರಾಯ ಇಲ್ಲದಂತೆ ಎಲ್ಲರೂ ಸಾಮರಸ್ಯದಿಂದ ಶ್ರೀಸಿದ್ದೇಶ್ವರ ಸಹಕಾರಿ ಬ್ಯಾಂಕ್ ನ್ನು ಅಭಿವೃದ್ಧಿ ಮಾಡಿ ಉನ್ನತಿಗೆ ಕೊಂಡೊಯ್ಯಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಕಿವಿ ಮಾತು ಹೇಳಿದರು.

ಶುಕ್ರವಾರ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಧಾನ ಕಛೇರಿಯಲ್ಲಿ ಶ್ರೀಸಿದ್ದೇಶ್ವರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಗೆ ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರನ್ನು ಸನ್ಮಾನಿಸಿ ಮಾತನಾಡಿದ ಸಚಿವರು, ಡಾ.ಫ.ಗು.ಹಳಕಟ್ಟಿ ಅವರಂಥ ಮಹಾತ್ಮರು ಜಿಲ್ಲೆಯ ಅಭ್ಯುದಯದ ದೂರದೃಷ್ಟಿಯಿಂದ ಶ್ರೀಸಿದ್ದೇಶ್ವರ ಸಹಕಾರಿ ಬ್ಯಾಂಕ್ ಕಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಮಟ್ಟಿಗೆ ಅತ್ಯಂತ ಪ್ರತಿಷ್ಠಿತ ಬ್ಯಾಂಕ್ ಎಂಬ ಹಿರಿಮೆ ಹೊಂದಿದೆ. ಇದು ನಮ್ಮ ಹಿರಿಯರು ಕಟ್ಟಿ ಬೆಳೆಸಿರುವ ಮಹತ್ವಕಾಂಕ್ಷೆಯ ಸಹಕಾರಿ ಬ್ಯಾಂಕ್. ಹೀಗಾಗಿ ಭವಿಷ್ಯದಲ್ಲಿ ಉಜ್ವಲವಾಗಿ ಬೆಳೆಸುವ ಜವಾಬ್ದಾರಿ ನಿಮ್ಮ ಮೇಲಿದ್ದು, ಸಮರ್ಥವಾಗಿ ನಿಭಾಯಿಸಬೇಕು ಎಂದರು.

ಜೊತೆಗೆ ಬ್ಯಾಂಕಿನ ಸದಸ್ಯರು ಸತತವಾಗಿ ನಿಮ್ಮನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಮೇಲೆ ಇರಿಸಿರುವ ವಿಶ್ವಾಸಕ್ಕೆ ಧಕ್ಕೆ ತರದಂತೆ ಬ್ಯಾಂಕ್ ಪ್ರಗತಿಗೆ ಶ್ರಮಿಸಬೇಕು. ಇದಕ್ಕಾಗಿ ಪ್ರಾಮಾಣಿಕ, ಬದ್ಧತೆ, ಸೇವಾ ಮನೋಭಾವದೊಂದಿಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಶ್ರೀಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಶೇರುದಾರ ಮತದಾರರು ನಿಮ್ಮ ಮೇಲೆ ಇರಿಸಿರುವ ವಿಶ್ವಾಸ, ನಂಬಿಕೆಗೆ ಚ್ಯುತಿ ಬಾರದಂತೆ ಬ್ಯಾಂಕ್‍ನ್ನು ಮುನ್ನಡೆಸಬೇಕು. ಶತಮಾನಕ್ಕೂ ಹಳೆಯದಾದ ನಮ್ಮ ಜಿಲ್ಲೆಯ ಹೆಮ್ಮೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ಆರ್ಥಿಕವಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉನ್ನತಿ ಸಾಧಿಸುವಂತೆ ಮಾಡಿ ಷಡ್ಯೂಲ್ ಬ್ಯಾಂಕ್ ದರ್ಜೆಗೆ ಕೊಂಡೊಯ್ಯಬೇಕು ಎಂದು ಮಾರ್ಗದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಈರಣ್ಣ ಎಂ. ಪಟ್ದಣಶೆಟ್ಟಿ, ಡಾ.ಸಂಜೀವ ಎಸ್. ಪಾಟೀಲ ಮುಳವಾಡ, ವೈಜ್ಯನಾಥ ಡಿ. ಕರ್ಪೂರಮಠ, ಆರ್.ಎಂ.ಪಾಟೀಲ ಉಪ್ಪಲದಿನ್ನಿ, ವಿಶ್ವನಾಥ ಎಸ್. ಪಾಟೀಲ ಮಸಬಿನಾಳ, ರಮೇಶ ಎಚ್. ಬಿದನೂರ, ಗುರು ಗಚ್ಚಿನಮಠ, ಶ್ರೀಮತಿ ಕರುಣಾ ಪಾಟೀಲ, ಶ್ರೀಮತಿ ಬೋರಮ್ಮ ಬಿ. ಗೊಬ್ಬೂರು, ಶ್ರೀಮತಿ ಸೌಭಾಗ್ಯ ಎಸ್. ಭೋಗಶೆಟ್ಟಿ, ಪ್ರಕಾಶ ಎಸ್. ಬಗಲಿ, ರವೀಂದ್ರ ಬಿಜ್ಜರಗಿ, ಸಾಯಬಣ್ಣ ಸಿ. ಭೋವಿ, ಅಮೋಘಸಿದ್ಧ ನಾಯ್ಕೋಡಿ, ಗುರುರಾಜ ಸಿ. ಗಂಗನಳ್ಳಿ, ರಾಜಶೇಖರ ಎಸ್. ಕತ್ತಿ, ಹಿರಿಯ ಸಹಕಾರಿ ಧುರಿಣರಾದ ಸಂಗನಗೌಡ ಪಾಟೀಲ ಹಾಗೂ ಎಂ.ಆರ್.ಪಾಟೀಲ ಬಳ್ಳೊಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande