ರಾಯಚೂರು, 17 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಸ್ ಇ ಸುಧೀಂದ್ರ ಅವರು ತಿಂಥಣಿ ಹತ್ತಿರದ ಜೈವಿಕ ಇಂಧನ ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ.
ಜೈವಿಕ ಇಂಧನ ಉತ್ಪಾದನೆ ಹಾಗೂ ಬಳಕೆ ಬಗ್ಗೆ ರೈತರು ಹಾಗೂ ಅಧಿಕಾರಿಗಳೊಂದಿಗೆ ಅವರು ಇದೆ ವೇಳೆ ಚರ್ಚಿಸಿದರು.
ಜೈವಿಕ ಇಂಧನ ಉದ್ಯಾನದ ಸಂಯೋಜಕರಾದ ಡಾ.ಶ್ಯಾಮರಾವ್ ಕುಲಕರ್ಣಿ ಅವರು ಉದ್ಯಾನದಲ್ಲಿನ ಕಾರ್ಯ ಚಟುವಟಿಕೆಗಳ ಬಗ್ಗೆ ಅಧ್ಯಕ್ಷರಿಗೆ ವಿವರಿಸಿದರು.
ಹಾಲು ಒಕ್ಕೂಟದ ಮೂಲಕ ಹಾಲು ಸಂಗ್ರಹಣೆ ಮಾಡುವ ರೀತಿಯಲ್ಲಿ ಹೊಂಗೆ ಬೀಜಗಳನ್ನು ಸಹ ಸಂಗ್ರಹ ಮಾಡಿದಲ್ಲಿ ಜೈವಿಕ ಇಂಧನದ ಉತ್ಪಾದನೆಯ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಬಹುದಾಗಿದೆ ಎಂದು ಪ್ರಗತಿಪರ ರೈತರಾದ ದೇವರೆಡ್ಡಿ ಅವರು ಇದೆ ವೇಳೆ ಸಲಹೆ ಮಾಡಿದರು.
ಜೈವಿಕ ಇಂಧನ ಉದ್ಯಾನದಲ್ಲಿನ ಸಿಬ್ಬಂದಿಯು ಇನ್ನೂ ಹೆಚ್ಚಿನ ರೀತಿಯಲ್ಲಿ ಹಳ್ಳಿಹಳ್ಳಿಗಳಿಗೆ ಸಂಚರಿಸಿ ಜೈವಿಕ ಇಂಧನ ಮಹತ್ವದ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯ ಮಾಡಬೇಕು. ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯಿAದ ಇನ್ನು ಹೆಚ್ಚಿನ ಅನುದಾನ ದೊರಕಿದಲ್ಲಿ ಉದ್ಯಾನದಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಕೂವಾಗುತ್ತದೆ ಎಂದು ಮತ್ತೊಬ್ಬ ಪ್ರಗತಿಪರ ರೈತರಾದ ಗಂಗಾಧರ ನಾಯಕ್ ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಎಂ.ಡಿ.ಆಸಾದ್, ಸೋಮರಾಯ ಡಿ., ಜಿ ಹನುಮಂತರಾಯ ಬಿರಾದಾರ, ಚನ್ನಾರೆಡ್ಡಿ, ರತ್ನರಾಜ್ ಸಾಲಿಮಾನಿ, ಸೋಮಣ್ಣ ಹಾಲಭಾವಿ, ಬಸವರಾಜ ರಾಮದುರ್ಗ, ವೆಂಕಟೇಶ್ ಹಾವಿನಾಳ, ಭೀಮಣ್ಣ ಹುನಸಿಹೋಲಿ, ದವಳಸಾಬ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್