ಬಳ್ಳಾರಿ ಸಹಕಾರ ಸಂಘದ ನಿರ್ದೇಶಕರ ಚುನಾವಣೆ
ಬಳ್ಳಾರಿ, 17 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನ.02 ರಂದು ಸಂಘದ ಕಚೇರಿಯಲ್ಲಿ ಸಾಮಾನ್ಯ ಚುನಾವಣೆ ಜರುಗಲಿದೆ ಎಂದು ಗ್ರಾಹಕರ ಸಹಕಾರ ಸಂಘ ನಿಯಮಿತ ಅಲ್ಲೀಪುರ ಹಾಗೂ ಬಳ್ಳಾರಿ ಉಪವಿಭಾಗದ ದ್ವಿ.ದ.ಸ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ರಿಟ
ಬಳ್ಳಾರಿ ಸಹಕಾರ ಸಂಘದ ನಿರ್ದೇಶಕರ ಚುನಾವಣೆ


ಬಳ್ಳಾರಿ, 17 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನ.02 ರಂದು ಸಂಘದ ಕಚೇರಿಯಲ್ಲಿ ಸಾಮಾನ್ಯ ಚುನಾವಣೆ ಜರುಗಲಿದೆ ಎಂದು ಗ್ರಾಹಕರ ಸಹಕಾರ ಸಂಘ ನಿಯಮಿತ ಅಲ್ಲೀಪುರ ಹಾಗೂ ಬಳ್ಳಾರಿ ಉಪವಿಭಾಗದ ದ್ವಿ.ದ.ಸ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ರಿಟರ್ನಿಂಗ್ ಅಧಿಕಾರಿ ತಿಳಿಸಿದ್ದಾರೆ.

ಅಕ್ಟೋಬರ್ 18 ರಿಂದ ಬೆಳಿಗ್ಗೆ 11 ರಿಂದ ಮಧ್ಯಾಹ್ನ 03 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು. ಅಕ್ಟೋಬರ್ 25 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನ.

ಅಕ್ಟೋಬರ್ 26 ರಂದು ಬೆಳಿಗ್ಗೆ 11 ಗಂಟೆಯಿಂದ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಸಲ್ಲಿಸಿದ ನಾಮಪತ್ರ ಹಿಂಪಡೆಯಲು ಅ.27 ರಂದು ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶವಿರುತ್ತದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande