ಗದಗ, 16 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆ ಮುಂಡರಗಿ ತಾಲೂಕಿನ 110 ಕೆ.ವ್ಹಿ. ಸಿಂಗಟಾಲುರು ವಿದ್ಯುತ್ ವಿತರಣಾ ಕೇಂದ್ರದಿಂದ ಕೂಡ್ಲಿಗಿ ತಾಲೂಕಿನ 74 ಕೆರೆಗೆಳಿಗೆ ನೀರುತುಂಬಿಸುವ ಯೋಜನೆಯ 18000 ಕೆವಿಎ ಸ್ಥಾವರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಮಾರ್ಗವನ್ನು 5.6 ಕಿ.ಮೀ ದೂರದವರೆಗೆ ನಿರ್ಮಿಸುವ ಕಾಮಗಾರಿ ಪೂರ್ಣಗೊಂಡಿದ್ದು ಈ ವಿದ್ಯುತ್ ಮಾರ್ಗವು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಸಿಂಗಟಾಲುರು, ಹಮ್ಮಿಗಿ ಮತ್ತು ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ರಾಜವಾಳ ಗ್ರಾಮಗಳ ಮುಖಾಂತರ ಸರಹದ್ದಿನಲ್ಲಿ ಹಾದುಹೋಗುತ್ತದೆ. ಇದನ್ನು ದಿನಾಂಕ 17-10-2025 ರಂದು ಅಥವಾ ತದನಂತರ ಕಾರ್ಯಗತಗೊಳಿಸಲಾಗುವುದು.
ಸಾರ್ವಜನಿಕರು ಈ ವಿದ್ಯುತ್ ಮಾರ್ಗದಿಂತ ದೂರವಿರಬೇಕಾಗಿ ಕೋರಲಾಗಿದೆ, ದನ-ಕರುಗಳನ್ನು ವಿದ್ಯುತ್ ಗೋಪುರಗಳಿಗೆ ಕಟ್ಟುವುದಾಗಲಿ, ಮಾರ್ಗದ ಮೇಲೆ ಹಸಿ ದಂಟು-ತಂತಿಯನ್ನು ಎಸೆಯುವುದಾಗಲಿ ಗೋಪುರಗಳ ಮೇಲೆ ಹತ್ತುವುದಾಗಲಿ ಮಾಡಬಾರದು. ಒಂದು ವೇಳೆ ಮೇಲಿನ ಕಾರಣಗಳಿಂದ ವಿದ್ಯುತ್ ಅಪಘಾತಕ್ಕೆ ಒಳಪಟ್ಟರೆ ಕ.ನೀ.ನಿ.ನಿಯಮಿತವು/ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಜವಾಬ್ದಾರಿಯಲ್ಲ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / lalita MP