ಬೆಂಗಳೂರು, 16 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಆರ್‌ಎಸ್‌ಎಸ್ ಶತಮಾನೋತ್ಸವ ಸಂದರ್ಭದಲ್ಲಿ
ಯುವ ಪೀಳಿಗೆಯಲ್ಲಿ ರಾಷ್ಟ್ರೀಯ ಚಿಂತನೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಉದ್ದೇಶದಿಂದ, ಬೆಂಗಳೂರಿನ ‘ಉತ್ಥಾನ’ ಸಂಸ್ಥೆಯು ರಾಜ್ಯಮಟ್ಟದ “ಉತ್ಥಾನ ಪ್ರಬಂಧ ಸ್ಪರ್ಧೆ – 2025” ಅನ್ನು ಆಯೋಜಿಸಿದೆ.
ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾದ ಈ ಸ್ಪರ್ಧೆಯು “ಶಕ್ತಿಶಾಲಿ ಪುನರುಜ್ಜೀವಿತ ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಚಾರ, ವಿಕಾಸ ಮತ್ತು ವೈಶಾಲ್ಯ” ಎಂಬ ವಿಷಯದ ಮೇಲೆ ನಡೆಯಲಿದೆ.
ಸ್ಪರ್ಧೆಯಲ್ಲಿ ಮೊದಲ ಬಹುಮಾನವಾಗಿ ರೂ. 15,000, ಎರಡನೇ ಬಹುಮಾನ ರೂ. 12,000, ಮೂರನೇ ಬಹುಮಾನ ರೂ. 10,000, ಹಾಗೂ ಪ್ರೋತ್ಸಾಹ ಬಹುಮಾನವಾಗಿ ತಲಾ ರೂ. 2,000 ನಗದು ನೀಡಲಾಗುತ್ತದೆ.
ಸ್ಪರ್ಧೆಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಡೆಯಲಿದ್ದು, ಪ್ರಬಂಧದ 3,000 ಶಬ್ದಗಳೊಳಗೆ ಇರಬೇಕು. ಪ್ರಬಂಧದೊಂದಿಗೆ ಸ್ಪರ್ಧಿಯ ಹೆಸರು, ಕಾಲೇಜು ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತ ವಿದ್ಯಾರ್ಥಿಗಳು ತಮ್ಮ ಪ್ರಬಂಧವನ್ನು Word ಅಥವಾ PDF ಫೈಲ್ ರೂಪದಲ್ಲಿ utthanacompetition@gmail.com ಈ ವಿಳಾಸಕ್ಕೆ ಕಳುಹಿಸಬಹುದು.
ಪ್ರಬಂಧ ಸಲ್ಲಿಸುವ ಕೊನೆಯ ದಿನಾಂಕ ಅಕ್ಟೋಬರ್ 25, 2025 ಎಂದು ಆಯೋಜಕರು ತಿಳಿಸಿದ್ದಾರೆ.
‘ಉತ್ಥಾನ’ ಸಂಸ್ಥೆ ಪ್ರತಿವರ್ಷ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವನೆ, ಸಂಸ್ಕೃತಿಪರ ಚಿಂತನೆ ಮತ್ತು ಸಮಾಜಮುಖಿ ಸೃಜನಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ವಿವಿಧ ಸ್ಪರ್ಧೆಗಳು ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa