ರಾಯಚೂರು, 16 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜೆಎಸ್‌ಡಬ್ಲ್ಯೂ ತೋರಣಗಲ್ಲು ಅವರಿಂದ ಶಿಶುಕ್ಷ ತರಬೇತಿಗಾಗಿ ಅಕ್ಟೋಬರ್ 17ರಂದು ಸಂದರ್ಶನ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಬೇಕೆಂದು ಕೋರಲಾಗಿದೆ.
ಐಟಿಐ ಪಾಸಾದ ತರಬೇತುದಾರರಿಗೆ ತಮ್ಮ ಕಂಪನಿಯಲ್ಲಿ 1 ವರ್ಷದ ಶಿಶುಕ್ಷ ತರಬೇತಿಗಾಗಿ ಸಂದರ್ಶನವನ್ನು ನಡೆಸಲಿದ್ದಾರೆ.
ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಐಟಿಐ ಪಾಸಾದ ಅಂಕಪಟ್ಟಿ, ಆಧಾರ್ ಕಾರ್ಡ, ಬಯೋಡಾಟ, 05 ಭಾವಚಿತ್ರಗಳು, ಬ್ಯಾಂಕ್ ಪಾಸ್ ಬುಕ್, ಗುರುತಿನ ಚೀಟಿ, ಪಾನ್ ಕಾರ್ಡ ದಾಖಲಾತಿಗಳೊಂದಿಗೆ ಅಕ್ಟೋಬರ್ 17ರ ಬೆಳಿಗ್ಗೆ 10 ಗಂಟೆಗೆ ತರಬೇತಿದಾರರು ರಾಯಚೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಹಾಜರಾಗಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9449185499, 9743304428ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಸಂಸ್ಥೆಯ ದರ್ಜೆ-1ರ ಪ್ರಾಚಾರ್ಯರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್