ಸರಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ನಿಷೇಧ ; ಬಿಜೆಪಿ ಸರಕಾರದ ನಿರ್ಣಯ-ಗುಂಡೂರಾವ್
ಬೆಂಗಳೂರು, 16 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಾಜ್ಯದ ಸರಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿಷೇಧಿಸುವ ಕುರಿತು ನಡೆದ ಚರ್ಚೆ ಮತ್ತೊಂದು ತಿರುವು ಸಿಕ್ಕಿದೆ. ಶಾಲೆ ಹಾಗೂ ಕಾಲೇಜು ಆವರಣದಲ್ಲಿ ಶೈಕ್ಷಣಿಕ ಚಟುವಟಿಕೆ ಹೊರತು ಪಡಿಸಿ ಇನ್ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶ ಕೊಡಬ
Order


ಬೆಂಗಳೂರು, 16 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಜ್ಯದ ಸರಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿಷೇಧಿಸುವ ಕುರಿತು ನಡೆದ ಚರ್ಚೆ ಮತ್ತೊಂದು ತಿರುವು ಸಿಕ್ಕಿದೆ.

ಶಾಲೆ ಹಾಗೂ ಕಾಲೇಜು ಆವರಣದಲ್ಲಿ ಶೈಕ್ಷಣಿಕ ಚಟುವಟಿಕೆ ಹೊರತು ಪಡಿಸಿ ಇನ್ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶ ಕೊಡಬಾರದು ಎಂದು 2013 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆದೇಶ ಹೊರಡಿಸಿರುವ ಪ್ರತಿ ಹಂಚಿಕೊಂಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದಕ್ಕೆ ಬಿಜೆಪಿ ನಾಯಕರ ಅಭಿಪ್ರಾಯವೇನು ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಆದೇಶ ಪ್ರತಿ ಹಂಚಿಕೊಂಡಿರುವ ಅವರು, ಈ ಆದೇಶ ಪತ್ರದಲ್ಲಿ ಶಾಲಾ ಆವರಣದಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮ ನಡೆಸಲು ಪ್ರಸ್ತಾವನೆ ಕೂಡ ಸಲ್ಲಿಸಬಾರದು ಎಂದಿದೆ.

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ನಿಯಮ ತಂದು ಈಗ ಆ ನಿಯಮವನ್ನು ನಾವು ಪಾಲಿಸುವುದಿಲ್ಲ ಎಂದರೆ ಬಿಜೆಪಿಯವರಿಗೆ ಮತಿಭ್ರಮಣೆಯಾಗಿದೆ ಎಂದರ್ಥವಲ್ಲವೇ ಎಂದಿದ್ದಾರೆ.

ಆರ್‌ಎಸ್‌ಎಸ್‌ ಪರ ವಹಿಸಿಕೊಂಡು ಮಾತಾಡುತ್ತಿರುವ ಬಿಜೆಪಿಯವರು ಈ ನಿಯಮ ರೂಪಿಸುವಾಗ ಆರ್‌ಎಸ್‌ಎಸ್‌ ಹೊರತುಪಡಿಸಿ ಎಂದು ನಮೂದಿಸಬಹುದಿತ್ತಲ್ಲವೆ.? ಆಗ ಇವರ ಬುದ್ಧಿಗೆ ಮಂಕು ಬಡಿದಿತ್ತೆ.? ಕಾನೂನು ಜಾರಿಗೆ ತಂದ ಮೇಲೆ ಅದನ್ನು ಪಾಲಿಸುವುದು ಎಲ್ಲರ ಕರ್ತವ್ಯ. ಅದು ಆರ್‌ಎಸ್‌ಎಸ್‌ ಇರಲಿ ಇನ್ಯಾವುದೇ ಸಂಘಟನೆಯಿರಲಿ. ಕಾನೂನಿಗಿಂತ ಇಲ್ಯಾರು ದೊಡ್ಡವರಿಲ್ಲ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande