ಗಡ್ಚಿರೋಲಿ, 14 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ತೆಲಂಗಾಣದ ಉನ್ನತ ಮಾವೋವಾದಿ ನಾಯಕ ಮಲ್ಲೋಜಿ ವೇಣುಗೋಪಾಲ್ ರಾವ್ ಮತ್ತು ಅವರ 60 ಸದಸ್ಯರ ತಂಡ ಇಂದು ಗಡ್ಚಿರೋಲಿ ಪೊಲೀಸ್ ಠಾಣೆ ಎದುರು ಶರಣಾಗಿದ್ದಾರೆ. ವೇಣುಗೋಪಾಲ್ ರಾವ್ ಪೋಲಿಸರಿಗೆ ಅತ್ಯಂತ ಬೇಕಾದ ಮಾವೋವಾದಿಗಳಲ್ಲಿ ಒರ್ವನಾಗಿದ್ದು, ಆತನ ಮೇಲೆ ಸರ್ಕಾರ ₹1 ಕೋಟಿ ಬಹುಮಾನ ಘೋಷಿಸಿತ್ತು.
ಪೊಲೀಸರು ನಡೆಸಿದ ನಿರಂತರ ತಪಾಸಣೆ ಮತ್ತು ಭದ್ರತಾ ಕಾರ್ಯಗಳ ಫಲವಾಗಿ ಈ ಶರಣಾಗುವಿಕೆ ನಡೆದಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಈ ಘಟನೆಗೆ ಸಂಬಂಧಿಸಿ, ಪ್ರದೇಶದ ಶಾಂತಿ ಮತ್ತು ಭದ್ರತೆ ಸ್ಥಾಪನೆಗೆ ಇದು ಮಹತ್ವಪೂರ್ಣ ಸಾಧನೆ ಎಂದು ಹೇಳಿದ್ದಾರೆ.
ಶರಣಾದ ತಂಡವು ಮಾವೋ ಚಟುವಟಿಕೆಗಳಿಂದ ಉಂಟಾಗುತ್ತಿದ್ದ ದಾಳಿಗಳು, ಭಯೋತ್ಪಾದನೆ ಮತ್ತು ಕೊಲೆಗಳಲ್ಲಿ ಭಾಗವಹಿಸುತ್ತಿತ್ತು
ಈ ತಂಡದ ಶರಣಾಗುವಿಕೆಯಿಂದ ಗಡ್ಚಿರೋಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಮಾವೋವಾದಿ ಚಟುವಟಿಕೆಗಳ ಮೇಲೆ ಭಾರಿ ಪೆಟ್ಟು ಬಿದ್ದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa