ಜೋಡಿ ಕೊಲೆ ಆರೋಪಿ ಕಾಲಿಗೆ ಗುಂಡು, ಜಿಲ್ಲಾಸ್ಪತ್ರೆಗೆ ದಾಖಲು
ವಿಜಯಪುರ, 14 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ವಿಜಯಪುರದ ಕನ್ನೂರು ಗ್ರಾಮದಲ್ಲಿ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸರು ಪ್ರಕರಣ ಮುಖ್ಯ ಆರೋಪಿ ಅಕ್ಷಯ್ ಜುಲಜುಲೆ ಕಾಲಿಗೆ ಗುಂಡು ಹಾರಿಸಿದ್ದಾರೆ. ಪ್ರಕರಣದ 5 ಜನ ಆರೋಪಿಗಳನ್ನ ಸೆರೆ ಹಿ
ಫೈರಿಂಗ್


ವಿಜಯಪುರ, 14 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ವಿಜಯಪುರದ ಕನ್ನೂರು ಗ್ರಾಮದಲ್ಲಿ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ.

ವಿಜಯಪುರ ಗ್ರಾಮೀಣ ಪೊಲೀಸರು ಪ್ರಕರಣ ಮುಖ್ಯ ಆರೋಪಿ ಅಕ್ಷಯ್ ಜುಲಜುಲೆ ಕಾಲಿಗೆ ಗುಂಡು ಹಾರಿಸಿದ್ದಾರೆ.

ಪ್ರಕರಣದ 5 ಜನ ಆರೋಪಿಗಳನ್ನ ಸೆರೆ ಹಿಡಿಯಲು ಪೊಲೀಸರು ಮುಂದಾದಾಗ ಕನ್ನೂರು ಗ್ರಾಮದ ಹೊರ ವಲಯದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಪೊಲೀಸರ ಮೇಲೆ ದಾಳಿಗೆ ಯತ್ನಿಸಿ ಅಕ್ಷಯ್ ಪರಾರಿಯಾಗಲು ಯತ್ನಿಸಿದ್ದಾನೆ‌.

ಈ ವೇಳೆ ಅಕ್ಷಯ್ ಜುಲಜುಲೆ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.

ಈ ವೇಳೆ ಇಬ್ಬರು ಪೊಲೀಸರು ಸಿಬ್ಬಂದಿಗೂ ಗಾಯಗಳಾಗಿವೆ‌. ಆರೋಪಿ ಅಕ್ಷಯ್ ಹಾಗೂ ಗಾಯಗೊಂಡ ಪೊಲೀಸರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ‌.

ನಿನ್ನೆ ಸಾಗರ್ ಬೆಳ್ಳುಂಡಗಿ, ಇಸಾಕ್ ಕರೋಶಿ ತಲೆ ಮೇಲೆ ಕಲ್ಲು ಹಾಕಿ ಕೊಂದಿದ್ದ ಆರೋಪಿಗಳು, ಈ ಪೈಕಿ ಪ್ರಕರಣದಲ್ಲಿ ಅಕ್ಷಯ್ ಪ್ರಮುಖ ಪಾತ್ರ ವಹಿಸಿದ್ದ.

ಹಲವು ಪ್ರಕರಣಗಳಲ್ಲಿ ಕೂಡ ಆರೋಪಿ ಅಕ್ಷಯ್ ಭಾಗಿ ಆಗಿದ್ದಾನೆ. 2023 ರಲ್ಲಿ ಈರಣ್ಣಗೌಡ ಬಾತನ ಮೇಲೆ ಸದ್ಯ ಹತ್ಯೆಯಾದ ಸಾಗರ್, ಇಸಾಕ್ ಟೈಲ್ಸ್ ನಿಂದ ಹಲ್ಲೆ ಮಾಡಿದ್ದರಂತೆ.ನಂತರ ಈರಣ್ಣಗೌಡಾ ೮ ತಿಂಗಳ ಚಿಕಿತ್ಸೆ ನಂತರ ಮೃತ್ತಪಟ್ಟಿದ್ದರು.

ಈ ದ್ವೇಷದಿಂದ ಅಕ್ಷಯ್ ಹಾಗೂ ಈರಣಗೌಡ ಮಕ್ಕಳು ಸೇರಿ ಹತ್ಯೆ ಮಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಸ್ಪಷ್ಟಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande