ವಿಜಯಪುರ, 14 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಹಿರಿಯ ಸಹಕಾರಿಗಳಾದ ಸಚಿವ ಶಿವಾನಂದ ಪಾಟೀಲ ಅವರ ಪ್ರಯತ್ನದಿಂದಾಗಿ ಶ್ರೀಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಎದುರಾಳಿಗಳನ್ನು ಹಳೆಯ ಪೆನಲ್ ಕ್ಲೀನಸ್ವೀಪ್ ಮಾಡಿದ ಬೆನ್ನಲ್ಲೇ ಸಚಿವರ ಪ್ರಯತ್ನದಿಂದಾಗಿ ವಿಜಯಪುರ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.
ವಿಜಯಪುರ ಜಿಲ್ಲಾ ಸಹಕಾರಿ ಯುನಿಯನ್ ನಿ. ಅಧ್ಯಕ್ಷರಾಗಿ ಎಂ.ಸಿ. ಮುಲ್ಲಾ, ಉಪಾಧ್ಯಕ್ಷರಾಗಿ ನಾಗಪ್ಪ ಅಮರಗೊಂಡ ಅವಿರೋಧ ಆಯ್ಜೆಯಾಗಿದ್ದಾರೆ.
ಈಚೆಗೆ ನಡೆದ ಚುನಾವಣೆಯಲ್ಲಿ 2025-30 ರ ಅವಧಿಗೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ 12 ನಿರ್ದೇಶಕರು ಆಯ್ಕೆ ಆಗಿದ್ದರು. ಓರ್ವ ಪದ ನಿಮಿತ್ತ ನಿರ್ದೇಶಕರು ಸೇರಿ 13 ನಿರ್ದೇಶಕರಿದ್ದಾರೆ.
ಮಂಗಳವಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಎಂ.ಸಿ. ಮುಲ್ಲಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಗಪ್ಪ ಶಿವಾನಂದ ಅಮರಗೊಂಡ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.
ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಎಂ.ಸಿ.ಮುಲ್ಲಾ ಹಾಗೂ ನಾಗಪ್ಪ ಅಮರಗೊಂಡ ಅವರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಆಗಿದ್ದಾರೆ.
ನಿರ್ದೇಶಕರಾದ ಸಂಗನಬಸಪ್ಪ ಎಸ್. ತಳೇವಾಡ, ಬಸವರಾಜ ಎಂ. ಕುಂಬಾರ, ಶ್ರೀಮಂತ ಜೆ. ಇಂಡಿ, ಚಂದ್ರಶೇಖರ ಎಸ್ ಪಾಟೀಲ, ಭೀಮರಾಯ ಎಸ್. ಹುಡೇದ, ಶ್ರೀಹರ್ಷಗೌಡ ಎಸ್. ಪಾಟೀಲ, ಕೃಷ್ಣಗೌಡ ಭೀಮನಗೌಡ ಪಾಟೀಲ ವಕೀಲರು, ಸುರೇಶಗೌಡ ಬಿರಾದಾರ, ಚಂದ್ರವ್ವ ಎಸ್. ಮಳ್ಳದ , ವಿಶ್ವನಾಥ ಬಿ. ಪಾಟೀಲ ಹಾಗೂ ಪದ ನಿಮಿತ್ತ ನಿರ್ದೇಶಕಿ ಎಸ್.ಕೆ.ಸೌಭಾಗ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚುನಾವಣಾ ಅಧಿಕಾರಿಯಾಗಿ ಸಹಕಾರಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚೇತನಕುಮಾರ ಭಾವಿಕಟ್ಟಿ ಹಾಗೂ ಸಹಾಯಕರಾಗಿ ಸಹಕಾರಿ ಯುನಿಯನ್ ಸಿಇಒ ಕೆ.ಎನ್.ಪಾರಗೊಂಡ ಸಹಾಯಕ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande