ಹೊಸ ಕ್ರಿಮಿನಲ್ ಕಾನೂನುಗಳಿಂದ ವಿಶ್ವದ ಅತ್ಯಾಧುನಿಕ ನ್ಯಾಯ ವ್ಯವಸ್ಥೆ : ಅಮಿತ್ ಶಾ
ಜೈಪುರ, 13 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನವು ಭಾರತದ ನ್ಯಾಯ ವ್ಯವಸ್ಥೆಯನ್ನು ವಿಶ್ವದ ಅತ್ಯಾಧುನಿಕ ವ್ಯವಸ್ಥೆಯಾಗಿ ಪರಿವರ್ತಿಸುತ್ತದೆ ಎಂದು ಹೇಳಿದರು. ಜೈಪುರದ ಜೈಇಸಿಸಿ ಪ್ರದರ್ಶನ ಕೇಂದ್ರದಲ್ಲಿ ನಡೆದ ರಾಜ್ಯಮಟ್ಟದ
ಹೊಸ ಕ್ರಿಮಿನಲ್ ಕಾನೂನುಗಳಿಂದ ವಿಶ್ವದ ಅತ್ಯಾಧುನಿಕ ನ್ಯಾಯ ವ್ಯವಸ್ಥೆ : ಅಮಿತ್ ಶಾ


ಜೈಪುರ, 13 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನವು ಭಾರತದ ನ್ಯಾಯ ವ್ಯವಸ್ಥೆಯನ್ನು ವಿಶ್ವದ ಅತ್ಯಾಧುನಿಕ ವ್ಯವಸ್ಥೆಯಾಗಿ ಪರಿವರ್ತಿಸುತ್ತದೆ ಎಂದು ಹೇಳಿದರು.

ಜೈಪುರದ ಜೈಇಸಿಸಿ ಪ್ರದರ್ಶನ ಕೇಂದ್ರದಲ್ಲಿ ನಡೆದ ರಾಜ್ಯಮಟ್ಟದ ಹೊಸ ಕ್ರಿಮಿನಲ್ ಕಾನೂನು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಕಾನೂನುಗಳು ಬಾಕಿ ಪ್ರಕರಣಗಳ ನಿವಾರಣೆಯನ್ನು ವೇಗಗೊಳಿಸಿ “ಸಮಯಕ್ಕೆ ಸರಿಯಾದ ನ್ಯಾಯ” ಒದಗಿಸಲಿವೆ ಎಂದು ಹೇಳಿದರು. 2027ರೊಳಗೆ ಯಾವುದೇ ಎಫ್‌ಐಆರ್‌ನಿಂದ ಮೂರು ವರ್ಷಗಳ ಒಳಗೆ ನ್ಯಾಯ ಸುಪ್ರೀಂ ಕೋರ್ಟ್‌ಗೆ ತಲುಪುವ ವ್ಯವಸ್ಥೆ ರೂಪಿಸಲಾಗುವುದು ಎಂದರು.

ಶಾ ಅವರು ಹೊಸ ಕಾನೂನುಗಳಿಂದ ಭಯೋತ್ಪಾದನೆ, ಸಂಘಟಿತ ಅಪರಾಧ ಮತ್ತು ಡಿಜಿಟಲ್ ಅಪರಾಧಗಳಿಗೆ ಸ್ಪಷ್ಟ ವ್ಯಾಖ್ಯಾನ ನೀಡಲಾಗಿದೆ ಎಂದರು. ದೇಶಾದ್ಯಂತ ಈಗಾಗಲೇ ಶೇಕಡಾ 50 ರಷ್ಟು ಪ್ರಕರಣಗಳಲ್ಲಿ ಸಮಯಕ್ಕೆ ಸರಿಯಾಗಿ ಚಾರ್ಜ್‌ಶೀಟ್‌ಗಳು ಸಲ್ಲಿಕೆಯಾಗಿವೆ, ಮುಂದಿನ ವರ್ಷ ಇದು 90% ತಲುಪಲಿದೆ ಎಂದರು.

ಪೊಲೀಸ್‌, ನ್ಯಾಯಾಂಗ ಮತ್ತು ಎಫ್‌ಎಸ್‌ಎಲ್ ಸಿಬ್ಬಂದಿಗೆ ವ್ಯಾಪಕ ತರಬೇತಿ ನೀಡಲಾಗಿದ್ದು, ಆರೋಪಿಗಳು ಇದೀಗ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗುವ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾ ಅವರು ₹4 ಲಕ್ಷ ಕೋಟಿ ಮೌಲ್ಯದ ಹೂಡಿಕೆ ಒಪ್ಪಂದಗಳನ್ನು ಉದ್ಘಾಟಿಸಿ, ₹9,315 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಿದರು. ವಿದ್ಯಾರ್ಥಿಗಳಿಗೆ ₹260 ಕೋಟಿ ಸಮವಸ್ತ್ರ ಸಹಾಯ ಮತ್ತು ಹಾಲು ಉತ್ಪಾದಕರಿಗೆ ₹364 ಕೋಟಿ ಸಬ್ಸಿಡಿ ಬಿಡುಗಡೆ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande