ರಾಯಚೂರು, 13 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆಯಿಂದ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ (ಪಿಎಂ ಸ್ವ-ನಿಧಿ) ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯು ಜೂನ್ 2020ರಲ್ಲಿ ಪ್ರಾರಂಭಿಸಲ್ಪಟ್ಟಿದ್ದು, ರಾಷ್ಟ್ರ ಮಟ್ಟದಲ್ಲಿ ಇಲ್ಲಿವರೆಗೆ 68 ಲಕ್ಷಕ್ಕೂ ಹೆಚ್ಚು ಬೀದಿ ವ್ಯಾಪಾರಿಗಳಿಗೆ ಯಶಸ್ವಿಯಾಗಿ ಸಾಲ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕೇಂದ್ರ ಸಚಿವ ಸಂಪುಟವು ಪಿಎಂ ಸ್ವ-ನಿಧಿ ಯೋಜನೆಯ ಪುನರ್ ರಚನೆ ಮತ್ತು ವಿಸ್ತರಣೆಯನ್ನು ಮಾರ್ಚ್ 2030ರವರೆಗೆ ಅನುಮೋದಿಸಲಾಗಿದೆ.
ಈ ಯೋಜನೆಯಡಿ ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸುವುದು, ಡಿಜಿಟಲ್ ವಹಿವಾಟು ನಡೆಸಲು ಉತ್ತೇಜಿಸುವುದು, ಸಾಮಥ್ರ್ಯ ಅಭಿವೃದ್ಧಿಯನ್ನು ವೃದ್ಧಿಸುವುದು ಮತ್ತು ಬೀದಿ ಬದಿ ವ್ಯಾಪಾರಿಗಳು ಮತ್ತು ಅವರ ಕುಟುಂಬದ ಸದಸ್ಯರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಕಲ್ಪಿಸುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುμÁ್ಠನಗೊಳಿಸಲು ವಿಸ್ತರಿಸಿ ಪುನರ್ ರಚಿಸಲಾಗಿದೆ.
ಮಂಜೂರಾತಿ ಮತ್ತು ವಿತರಣೆಗಾಗಿ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ವಿಲೇ ಮಾಡಲು, ಬ್ಯಾಂಕಿನಿಂದ ಹಿಂದಿರುಗಿಸಲ್ಪಟ್ಟ ಅರ್ಜಿಗಳನ್ನು ಮರು ಸಲ್ಲಿಸುವುದು, ಡಿಜಿಟಲನಲ್ಲಿ ನಿಷ್ಕ್ರಿಯಗೊಂಡ ಬೀದಿ ವ್ಯಾಪಾರಿಗಳನ್ನು ಡಿಜಿಟಲ್ ವಹಿವಾಟಿನಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುವುದು, ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ಸಾಮಾಜಿಕ ಭದ್ರತಾ ಯೋಜನೆಯನ್ನು ಕಲ್ಪಿಸಲು ಆದೇಶ ಇರುತ್ತದೆ. ಪಿಎಂ ಸ್ವನಿಧಿ ಫಲಾನುಭವಿಗಳ ಮೊದಲನೇ ಹಂತ 15000 ರೂ.ಗಳನ್ನು ನೀಡಲಾಗುವುದು.
ಆಸಕ್ತರು ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವೈಯಕ್ತಿಕ ಬ್ಯಾಂಕ್ ಪಾಸ್‍ಬುಕ್, ವ್ಯಾಪಾರ ಮಾಡುತ್ತಿರುವ ಸ್ಥಳದಲ್ಲಿನ ಫೋಟೋ-2, ಪಾಸ್‌ಪೋರ್ಟ್-2 ಹಾಗೂ ವ್ಯಾಪಾರದ ಗುರುತಿನ ಚೀಟಿನೊಂದಿಗೆ ಅಕ್ಟೋಬರ್ 29ರ ಸಂಜೆ 5ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಸಮಯದಲ್ಲಿ ಪಾಲಕೆಯಯನ್ನು ಸಂಪರ್ಕ ಮಾಡಬಹುದಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರು ತಿಳಿಸಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್