ಮಧ್ಯಸ್ಥಿಕೆ ಮೂಲಕ ಜಿಲ್ಲೆಯಲ್ಲಿ ೨೩೫ ಪ್ರಕರಣಗಳು ಇತ್ಯರ್ಥ
ವಿಜಯಪುರ, 10 ಅಕ್ಟೋಬರ್ (ಹಿ.ಸ.): ಆ್ಯಂಕರ್: ರಾಷ್ಟ್ರ ವ್ಯಾಪ್ತಿ ಮಧ್ಯಸ್ಥಿಕೆ ಅಭಿಯಾನದ ಅಂಗವಾಗಿ ಜಿಲ್ಲಾ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಹಮ್ಮಿಕೊಂಡ ೯೦ ದಿನಗಳ ವಿಶೇಷ ಅಭಿಯಾನದಲ್ಲಿ ಒಟ್ಟು ೨೩೫ ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ
ಮಧ್ಯಸ್ಥಿಕೆ ಮೂಲಕ ಜಿಲ್ಲೆಯಲ್ಲಿ ೨೩೫ ಪ್ರಕರಣಗಳು ಇತ್ಯರ್ಥ


ವಿಜಯಪುರ, 10 ಅಕ್ಟೋಬರ್ (ಹಿ.ಸ.):

ಆ್ಯಂಕರ್: ರಾಷ್ಟ್ರ ವ್ಯಾಪ್ತಿ ಮಧ್ಯಸ್ಥಿಕೆ ಅಭಿಯಾನದ ಅಂಗವಾಗಿ ಜಿಲ್ಲಾ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಹಮ್ಮಿಕೊಂಡ ೯೦ ದಿನಗಳ ವಿಶೇಷ ಅಭಿಯಾನದಲ್ಲಿ ಒಟ್ಟು ೨೩೫ ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ್ ತಿಳಿಸಿದ್ದಾರೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಮಧ್ಯಸ್ಥಿಕೆ ಮತ್ತು ಸಂದಾನ ಯೋಜನಾ ಸಮಿತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಜುಲೈ ೧ ರಿಂದ ಅಕ್ಟೋಬರ ೭ ವರೆಗೆ ಬಾಗಲಕೋಟೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ ೯೦ ದಿನಗಳ ವಿಶೇಷ ಅಭಿಯಾನ ಯಶಸ್ವಿಯಾಗಿ ನಡೆಸಲಾಗಿದ್ದು, ಈ ಅಭಿಯಾನದಲ್ಲಿ ಒಟ್ಟು ೨೩೫ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಈ ಅಭಿಯಾನದಲ್ಲಿ ೧೬೪೦ ಪ್ರಕರಣಗಳನ್ನು ಮಧ್ಯಸ್ಥಿಕೆ ಅಭಿಯಾನದಲ್ಲಿ ತೆಗೆದುಕೊಳ್ಳಲಾಗಿದ್ದು, ಈ ಪೈಕಿ ೪೦೩ ಪ್ರಕರಣಗಳ ಮಧ್ಯಸ್ಥಿಕೆ ನಡೆಸಲಾಯಿತು. ಮಧ್ಯಸ್ಥಿಕೆಯಲ್ಲಿ ಒಟ್ಟು ೨೩೫ ಪ್ರಕರಣಗಳು ಇತ್ಯರ್ಥಗೊಂಡಿರುತ್ತವೆ. ಅದರಲ್ಲಿ ಮೂರು ವೈವಾಹಿಕ ವಿವಾದಗಳು, ೪ ಅಪಘಾತದ ಹಕ್ಕು ಪ್ರಕರಣಗಳು, ೬ ಚೆಕ್ ಬೌನ್ಸ್ ಪ್ರಕರಣಗಳು, ೧೦ ಕ್ರೀಮಿನಲ್ ಕಂಪೌಂಡೇಬಲ್ ಪ್ರಕರಣಗಳು, ೫೯ ವಿಭಜನೆ ಪ್ರಕರಣಗಳು, ೧೨೬ ಭೂಸ್ವಾಧೀನ ಪ್ರಕರಣಗಳು ಹಾಗೂ ೨೭ ಇತರೆ ನಾಗರಿಕ ವಿವಾದಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಗೊಂಡಿವೆ. ಮಧ್ಯಸ್ಥಿಕೆ ಅಭಿಯಾನದ ಯಶಸ್ವಿಗೆ ಸಹಕರಿಸಿದ ವಕೀಲರು, ಕಕ್ಷಿದಾರರು, ಮಧ್ಯಸ್ಥಿಕೆದಾರರು ಹಾಗೂ ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande