
ಕೋಲಾರ, 08 ಸೆಪ್ಟೆಂಬರ್ (ಹಿ.ಸ)
ಆ್ಯಂಕರ್ : ಕೋಲಾರ ತಾಲ್ಲೂಕು, ನರಸಾಪುರ ಸಮೀಪದ ನಾಗಲಾಪುರ ಗ್ರಾಮದ ಶ್ರೀಮದ್ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಶ್ರೀಗಳಿಂದ ೧೪ನೇ ವರ್ಷದ ಶ್ರಾವಣ ಶಿವಸಂಜೆ ಶಿವಾನುಭವ ಮಾಸಿಕ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಸೆ.೧೦ ಗುರುವಾರದಂದು ಸಂಜೆ ೫ ಗಂಟೆಗೆ ನಾಗಲಾಪುರದಲ್ಲಿ ಆಯೋಜಿಸಲಾಗಿದೆ.
ಶ್ರೀಮದ್ ರಂಬಾಪುರಿ ಪೀಠದ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನ್ನಿದ್ಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವಿಶ್ವಶಾಂತಿ, ಲೋಕಕಲ್ಯಾಣಾರ್ಥವಾಗಿ ಪರಾಭವ ನಾಮ ಸಂವತ್ಸರ ಶ್ರಾವಣ ಮಾಸದ ಮನೆ ಮನೆಗಳಲ್ಲಿ ಶ್ರಾವಣ ಶಿವಸಂಜೆ, ಮಹಾ ಶಿವಪೂಜೆ ಶಿವಾನುಭವ ಕಾರ್ಯಕ್ರಮವನ್ನು ಆ.೧೩ ರಿಂದ ಸೆ.೧೦ರ ವರೆಗೆ ಹಮ್ಮಿಕೊಳ್ಳಲಾಗಿತ್ತು.
ಶ್ರಾವಣ ಮಾಸದ ಕೊನೆಯ ದಿನವಾದ ಸೆ.೧೦ ರಂದು ಗುರುವಾರ ಸಂಜೆ ೫ ಗಂಟೆಗೆ ನಾಗಲಾಪುರ ಮಠದಲ್ಲಿ ಶ್ರಾವಣ ಶಿವಸಂಜೆಯ ಸಮಾರೋಪ ಸಮಾರಂಭವು ಇಷ್ಟಲಿಂಗ ಮಹಾಪೂಜೆಯೊಂದಿಗೆ ನಡೆಯುವುದು. ನಾಗಲಾಪುರ ಮಠಾಧ್ಯಕ್ಷರಾದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನ್ನಿದ್ಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನಾಗಲಾಪುರ ಮಠದಲ್ಲಿ ವಿಶೇಷ ಪೂಜೆ ಮತ್ತು ದಾಸೋಹದ ವ್ಯವಸ್ಥೆಯನ್ನು ಕಾಳಪ್ಪನಹಳ್ಳಿಯ ಕೆ.ಆರ್. ಷಡಕ್ಷರಿ ಶಾಸ್ತಿçÃಗಳು ಮಾಡಿರುತ್ತಾರೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರಾವಣ ಶಿವಸಂಜೆ ಶಿವಾನುಭವ ಕಾರ್ಯಕ್ರಮ ಯಶಸ್ವಿಗೊಳಿಸಲು ಹಾಗೂ ಭಗವಂತನÀ ಕೃಪೆಗೆ ಪಾತ್ರರಾಗಲು ಶ್ರೀಮದ್ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಪ್ರಕಟಣೆಯಲ್ಲಿ ಕೋರಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್