
ಇಟಾನಗರ, 07 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಈಶಾನ್ಯ ಭಾರತದ ನಾಲ್ಕು ದಿನಗಳ ಪ್ರವಾಸದ ಅಂಗವಾಗಿ ಸೆ.8 ಮತ್ತು 9ರಂದು ಅರುಣಾಚಲ ಪ್ರದೇಶದ ಇಟಾನಗರಕ್ಕೆ ಭೇಟಿ ನೀಡಲಿದ್ದಾರೆ.
ಎರಡು ದಿನಗಳ ಪ್ರವಾಸದ ವೇಳೆ ಅರುಣಾಚಲ ಪ್ರದೇಶ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಅವರು ಭಾಗವಹಿಸಲಿದ್ದಾರೆ. ಅಲ್ಲದೆ, ವಿಧಾನಸಭೆಯ ಗ್ಯಾಲರಿ-ಸಹ-ವಸ್ತುಸಂಗ್ರಹಾಲಯಕ್ಕೂ ಭೇಟಿ ನೀಡಲಿದ್ದಾರೆ.
ಇಟಾನಗರದ ನ್ಯೇದಾರ್ ನಾಮ್ಲೊ ದೇವಾಲಯ, ಜವಾಹರಲಾಲ್ ನೆಹರು ರಾಜ್ಯ ವಸ್ತುಸಂಗ್ರಹಾಲಯ ಹಾಗೂ ಚಿಂಪು ಪ್ರದೇಶದಲ್ಲಿರುವ ಶ್ರವಣ ಮತ್ತು ದೃಷ್ಟಿದೋಷ ಹೊಂದಿರುವವರಿಗಾಗಿ ಕಾರ್ಯನಿರ್ವಹಿಸುವ ಡೋನಿ ಪೊಲೊ ಮಿಷನ್ ಶಾಲೆಗೂ ಉಪರಾಷ್ಟ್ರಪತಿ ಭೇಟಿ ನೀಡಲಿದ್ದಾರೆ.
ಉಪರಾಷ್ಟ್ರಪತಿಗಳ ಸ್ವಾಗತಕ್ಕಾಗಿ ರಾಜಧಾನಿ ಪ್ರದೇಶದಲ್ಲಿ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ರಸ್ತೆ ನಿರ್ವಹಣೆ, ಸೌಂದರ್ಯೀಕರಣ ಹಾಗೂ ನಾಗರಿಕ ಸೌಲಭ್ಯಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನೂ ಕೈಗೊಳ್ಳಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.