ಶ್ರೀಕೃಷ್ಣ ಜನ್ಮಾಷ್ಟಮಿ:ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಭಾಶಯ
ಬೆಂಗಳೂರು, 04 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಫಲಾಪೇಕ್ಷೆಯಿಲ್ಲದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದೇ ಭಗವದ್ಗೀತೆಯ ಶ್ರೇಷ್ಠ ಸಾರ. ನಾಡಿನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಜನಸೇವೆಗೆ ನಿರಂತರವಾಗಿ ಶ್ರಮಿಸಲು ಶ್ರೀಕೃಷ್ಣನ ಕರ್ಮಸಿದ್ಧಾಂತ ಸ್ಫೂರ್ತಿಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮ
ಸಿಎಂ ಎಕ್ಸ್ ಪೋಸ್ಟ್


ಬೆಂಗಳೂರು, 04 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಫಲಾಪೇಕ್ಷೆಯಿಲ್ಲದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದೇ ಭಗವದ್ಗೀತೆಯ ಶ್ರೇಷ್ಠ ಸಾರ. ನಾಡಿನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಜನಸೇವೆಗೆ ನಿರಂತರವಾಗಿ ಶ್ರಮಿಸಲು ಶ್ರೀಕೃಷ್ಣನ ಕರ್ಮಸಿದ್ಧಾಂತ ಸ್ಫೂರ್ತಿಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಎಕ್ಸ್‌ನಲ್ಲಿ ಶುಭಾಶಯ ಕೋರಿರುವ ಅವರು, ತುಂಟ ನಗುವಿನಿಂದ ಎಲ್ಲರ ಮನಸೂರೆಗೊಳ್ಳುವ ಶ್ರೀಕೃಷ್ಣನ ಜನ್ಮದಿನದ ಹರ್ಷ ಎಲ್ಲೆಡೆ ಮೊಳಗಲಿ. ಮುದ್ದು ಕೃಷ್ಣನ ಹೆಜ್ಜೆಗುರುತುಗಳು ಎಲ್ಲರ ಮನೆಗಳಲ್ಲಿ ಸದಾ ನೆಲೆಸಿರಲಿ ಎಂದು ಆಶಿಸಿದ್ದಾರೆ.

ಭಗವದ್ಗೀತೆಯ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರೇರಣೆಯನ್ನು ಈ ಹಬ್ಬ ನೀಡಲಿ. ಸಮಸ್ತ ನಾಡಿನ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande